ಭತ್ತ-ತೊಗರಿ ಬೆಳೆಗಾರರಿಗೆ ಸಂಕಷ್ಟ

15.ktal.01
Published on

ಕವಿತಾಳ: ಪ್ರಸ್ತುತ ಸುರಿಯುತ್ತಿರುವ ಮಳೆ ಭತ್ತ ಮತ್ತು ತೊಗರಿ ಬೆಳೆದ ರೈತರಿಗೆ ಮಾರಕವಾಗಿದೆ. ಗುರುವಾರ ಸುರಿದ ಮಳೆಯಿಂದ ಭತ್ತದ ಬೆಳೆ ನೆಲ ಕಚ್ಚಿದೆ. ಮಲ್ಲದಗುಡ್ಡದಲ್ಲಿ ಒಂದು ತಾಸಿಗೂ ಹೆಚ್ಚು ಹೊತ್ತು ಸುರಿದ ಮಳೆಯಿಂದ ಕೊಯ್ಲಿಗೆ ಬಂದಿರುವ ಭತ್ತದ ಬೆಳೆ ನೆಲದ ಪಾಲಾಗಿದೆ.

ತೋರಣದಿನ್ನಿ, ಮಲ್ಕಾಪುರ, ಹಾಲಾಪೂರ, ಜಂಗಮರಹಳ್ಳಿ, ಹಿರೇದಿನ್ನಿ, ಚಿಕ್ಕದಿನ್ನಿ, ದಿನ್ನಿ ಕ್ಯಾಂಪ್ ಸೇರಿದಂತೆ ನೀರಾವರಿ ವ್ಯಾಪ್ತಿಯಲ್ಲಿ ರೈತರು ಬೆಳೆದ ಭತ್ತದ ಬೆಳೆ ನೆಲಕ್ಕುರುಳಿರುವುದರಿಂದ ಪರಿಹಾರ ನೀಡಬೇಕು ಎಂದು ಶಾಸಕ ಬಸನಗೌಡ ತುರ್ವಿಹಾಳಗೆ, ತಹಸೀಲ್ದಾರ್ ಕೋರಿದ್ದಾರೆ. ಮತ್ತೊಂದೆಡೆ ಜೋಳ ಮತ್ತು ಕಡಲೆ ಬೆಳೆಗಳು ಮಳೆಯಿಲ್ಲದೆ ಬಾಡುತ್ತಿದ್ದವು. ಗುರುವಾರ ಸುರಿದ ಮಳೆಯಿಂದ ಬಾಡುತ್ತಿರುವ ಬೆಳೆಗೆ ಜೀವ ಕಳೆ ಬಂದಿದೆ. ಕವಿತಾಳ, ವಟಗಲ್, ಹಣಗಿ ಸೇರಿದಂತೆ ವಿವಿಧೆಡೆ ರೈತರು ಬಿತ್ತನೆ ಮಾಡಿರುವ ಜೋಳದ ಬೆಳೆಗೆ ಅನುಕೂಲವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net