

ಭಟ್ಕಳ: ಒಂದೇ ದಿನ 500 ಮಿ.ಮೀ.ಗೂ ಅಧಿಕ ಮಳೆ ಬಿದ್ದ ಉದಾಹರಣೆ ಉತ್ತರ ಕನ್ನಡ ಜಿಲ್ಲೆಯಲ್ಲಿ 20 ವರ್ಷಗಳ ದಾಖಲೆಯಲ್ಲಿ ಇರಲಿಲ್ಲ. ಆದರೆ, ಭಟ್ಕಳದಲ್ಲಿ ಸುರಿದ ಮಳೆ ದಾಖಲೆ ಮಾಡಿದೆ. ಮಂಗಳವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಸೂಸಗಡಿ ಗ್ರಾಪಂ ವ್ಯಾಪ್ತಿಯಲ್ಲಿ 550 ಮಿ.ಮೀ., ಮುಂಡಳ್ಳಿಯಲ್ಲಿ 549, ಮುಟ್ಟಳ್ಳಿಯಲ್ಲಿ 546 ಮಾವಿನಕುರ್ವೆಯಲ್ಲಿ 540.50 ಮಿ.ಮೀ. ಮಳೆಯಾಗಿದೆ.