ಭಟ್ಕಳ ಜನರು ಆತಂಕಪಡುವ ಅಗತ್ಯವಿಲ್ಲ

10bkl1_goutham k
Published on

ಭಟ್ಕಳ: ಪಟ್ಟಣದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಆದರೆ, ಇದು ಅವರ ಸಂಪರ್ಕದಲ್ಲಿ ಇರುವವರಲ್ಲಿ ಮಾತ್ರ ಪತ್ತೆಯಾಗುತ್ತಿದೆ. ಭಟ್ಕಳದಲ್ಲಿ ಇನ್ನೂ ಕಮ್ಯೂನಿಟಿ ಸ್ಪ್ರೇಡ್ ಆಗದಿರುವುದರಿಂದ ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಡಿವೈಎಸ್​ಪಿ ಗೌತಮ ಕೆ.ಸಿ. ತಿಳಿಸಿದ್ದಾರೆ.

ಪಟ್ಟಣದಲ್ಲಿ ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ಭಟ್ಕಳದಲ್ಲಿ ಪ್ರತಿದಿನ ಕರೊನಾ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದರಿಂದ ಪಟ್ಟಣದಲ್ಲಿ ಆತಂಕ ಮನೆ ಮಾಡಿದೆ. ಆದರೆ, ಇಲ್ಲಿ ಕಂಡು ಬಂದ ಪ್ರಕರಣಗಳು ಪಿ- 659 ಸಂಪರ್ಕದಲ್ಲಿರುವವರ ಯಾದಿಯಾಗಿದ್ದು, ಅವರನ್ನು ಬಿಟ್ಟು ಇತರರಿಗೆ ಪತ್ತೆಯಾಗಿಲ್ಲ. ನಾವು ಪತ್ತೆ ಮಾಡಿದವರಲ್ಲಿ ಮಾತ್ರವೇ ಸೋಂಕು ಪತ್ತೆಯಾಗುತ್ತಿದ್ದು, ಮುಂದಿನ 2 ದಿನಗಳಲ್ಲಿ ಇದು ಸಂಪೂರ್ಣ ನಿಯಂತ್ರಣಕ್ಕೆ ಬರಲಿದೆ. ಆದರೆ, ಸಾರ್ವಜನಿಕರು ಇನ್ನಷ್ಟು ಕಾಳಜಿ ವಹಿಸಬೇಕಿದೆ. ಕರೊನಾದಿಂದ ದೂರವಿರಲು ಜಾಗೃತಿಯೊಂದೆ ನಮ್ಮ ಬಳಿ ಇರುವ ಅಸ್ತ್ರವಾಗಿದೆ ಎಂದರು.

ಪಿ. 659 ಅವರ ಟ್ರಾವೆಲ್ ಹಿಸ್ಟರಿ, ಸಂರ್ಪತರ ಹಿಸ್ಟರಿ ಮತ್ತು ಅವರ ಸಂರ್ಪತರ ಪತ್ತೆ ಕಾರ್ಯ ಚಾಲನೆಯಲ್ಲಿದೆ. ಪ್ರತಿ ದಿನ ಸಾಕಷ್ಟು ಸಂಖ್ಯೆಯ ಗಂಟಲಿನ ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ತಾಲೂಕಾಡಳಿತ, ಪೊಲೀಸ್, ಆರೋಗ್ಯ ಇಲಾಖೆ ಸೇರಿ ಮಹಾಮಾರಿ ಪಸರಿಸದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಸಾಮಾಜಿಕ ಜಾಲತಾಣ, ಉಹಾಪೋಹ, ಸುಳ್ಳು ಸುದ್ದಿಗಳು ಸಾಕಷ್ಟು ಒಡಾಡುತ್ತಿದ್ದು, ಯಾವುದಕ್ಕೂ ಸಾರ್ವಜನಿಕರು ಕಿವಿಗೊಡದೆ ನೆಮ್ಮದಿ ಹಾಳು ಮಾಡಿಕೊಳ್ಳಬಾರದು ಎಂದು ಪೊಲೀಸ್ ಇಲಾಖೆ ಮನವಿ ಮಾಡುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net