

ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ಗುರುವಾರ 2568ನೇ ವೈಶಾಖ ಪವಿತ್ರ ಬುದ್ಧ ಪೂರ್ಣಿಮೆ ಹಿನ್ನೆಲೆ ಭಗವಾನ್ ಬುದ್ಧರ ಪ್ರತಿಮೆ ಮೆರವಣಿಗೆ ಮಾಡಲಾಯಿತು.
ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನ ಮುಂಭಾಗ ಲೊಕ್ಕನಹಳ್ಳಿಯ ಜೇತವನದ ಮನೋರಖ್ಖಿತ ಭಂತೇಜಿ ಅವರು ಬುದ್ಧ ಪ್ರತಿಮೆಯ ಮೆರವಣಿಗೆಗೆ ಪ್ರಾರ್ಥನೆ ಮಾಡುವ ಮೂಲಕ ಚಾಲನೆ ನೀಡಿದರು. ನಂತರ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಪ್ರತಿಮೆಯ ಮೆರವಣಿಗೆ ನಡೆಯಿತು.
ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜು, ಖಜಾಂಚಿ ಸೋಮಣ್ಣ, ಜಿಲ್ಲಾ ಕಮಾಂಡರ್ ಸಮತಾ ಸೈನಿಕದಳದ ಪುಟ್ಟಸ್ವಾಮಿ, ಮಧುವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಪ್ಪ, ಸದಸ್ಯರಾದ ನಾಗರಾಜು, ಮಲ್ಲೇಶ್, ಯಜಮಾನರಾದ ಜಡೇಲಿಂಗಯ್ಯ, ಮುಖಂಡರಾದ ಶಾಂತರಾಜು, ಜಯಪ್ಪ, ಮಲ್ಲಿಕಾರ್ಜುನ್, ವಕೀಲರಾದ ನಾಗಸುಂದರ್, ಜ್ಯೋತಿ ಪ್ರಕಾಶ್, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಕೆಂಪರಾಜು ಮತ್ತಿತರಿದ್ದರು.