

ವಿಜಯವಾಣಿ ಸುದ್ದಿಜಾಲ ಧಾರವಾಡ
ಮನೆ- ಮನಗಳಿಗೂ ಭಗವದ್ಗೀತೆಯ ಸಾರ ತಲುಪುವಂತಾಗಬೇಕು. ಗೀತೆಯಲ್ಲಿ ಅಡಗಿರುವ ಮೌಲ್ಯಗಳು ಮಕ್ಕಳ ಮನಸ್ಸನ್ನು ಶುದ್ಧಿಗೊಳಿಸಬಲ್ಲವು. ಮಕ್ಕಳು ಭಕ್ತಿ, ಶೃದ್ಧೆ ಸಮರ್ಪಣಾ ಭಾವದಿಂದ ಅಭ್ಯಾಸ ಮಾಡುವುರಿಂದ ವಿವಿಧ ವಿಷಯಗಳಲ್ಲಿ ಜ್ಞಾನ ಸಂಪಾದಿಸಬುಹುದು ಎಂದು ಸಿ.ಎಲ್.ವೈ ಸಂಸ್ಕೃತ ಮಹಾವಿದ್ಯಾಲಯದ ಉಪನ್ಯಾಸಕ ಸೂರ್ಯನಾರಾಯಣ ಭಟ್ಟ ಹೇಳಿದರು.
ನಗರದ ಮಾಳಮಡ್ಡಿಯ ಕೆ .ಇ. ಬೋರ್ಡ್ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃಷ್ಣ ಪರಮಾತ್ಮ ಬೋಽಸಿದ ಭಗವದ್ಗೀತೆಯ ನುಡಿಗಳು ಪ್ರತಿಯೊಬ್ಬರ ಬದುಕನ್ನು ಹಸನಾಗಿಸುವಲ್ಲಿ ಯೋಗ್ಯವಾಗಿದೆ. ಗೀತೆಯ ನಿರಂತರ ಅಧ್ಯಯನದಿಂದ ವಿಷಯಗ್ರಹಣ ಶಕ್ತಿ ವೃದ್ಧಿಸುತ್ತದೆ. ಅಲ್ಲದೆ, ಕೆಲಸ ಮಾಡುವ ಚೈತನ್ಯ ಹೆಚ್ಚಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆಯ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ ಮಾತನಾಡಿ, ಮಕ್ಕಳು ನಿರ್ಮಲ ಭಾವದಿಂದ ಗೀತಾ ಪಠಣ ಮಾಡಿ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ಗೀತಾ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದರು.
ಸAಸ್ಥೆಯ ಖಜಾಂಚಿ ಎಸ್.ಎನ್. ಪರಾಂಡೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಎಸ್.ಎಸ್. ಹೆಗಡೆ, ಸಿಂಧೂ ಶಿರೂರ, ನಾಗಶೆಟ್ಟಿ, ಸ್ಮಿತಾ ಕುಲಕರ್ಣಿ, ಅಶ್ವಿನಕುಮಾರ, ಬಸವರಾಜ ಪಾಟೀಲ, ಇತರರಿದ್ದರು.
ಉಪ ಪ್ರಾಚಾರ್ಯ ಎನ್.ಎಸ್. ಗೋವಿಂದರಡ್ಡಿ ಸ್ವಾಗತಿಸಿದರು. ಪರಿಚಯಿಸಿದರು. ಅಭಿನಂದನ ನಿರೂಪಿಸಿದರು. ಎನ್.ಎನ್. ಸವಣೂರ ವಂದಿಸಿದರು.