ಭಗವದ್ಗೀತೆ ಸಂದೇಶ ಪ್ರವಚನ ನಾಳೆಯಿಂದ

h22-swami brahmaanand
Published on

ಹುಬ್ಬಳ್ಳಿ: ದೇಶಪಾಂಡೆನಗರ ಗುಜರಾತ ಭವನದಲ್ಲಿ ಡಿ. 24ರಿಂದ 28ರವರೆಗೆ ನಿತ್ಯ ಸಂಜೆ 6.30ರಿಂದ 8ರವರೆಗೆ ಹುಬ್ಬಳ್ಳಿಯ ಚಿನ್ಮಯ ಮಿಷನ್ ವತಿಯಿಂದ ಗೀತ ಜ್ಞಾನ ಯಜ್ಞ ಏರ್ಪಡಿಸಲಾಗಿದೆ.

ಸ್ವಾಮಿ ಬ್ರಹ್ಮಾನಂದ ಅವರು ಭಗವದ್ಗೀತೆಯ ಸಂದೇಶದ ಕುರಿತು ಪ್ರವಚನ ನೀಡುವರು. ಕರ್ನಾಟಕದ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸ್ವಾಮಿ ಬ್ರಹ್ಮಾನಂದರು ಚಿರಪರಿಚಿತರು. ಅವರ ಸರಳ ಮನಮುಟ್ಟುವ ಪ್ರವಚನ, ಸುಮಧುರ ಭಜನೆಗಳು, ದೋಷರಹಿತ ಸ್ವರಬದ್ಧ ವೇದಪಠಣ ಅಪಾರ ಜನರನ್ನು ಆಕರ್ಷಿಸುತ್ತದೆ. ಭಗವದ್ಗೀತೆ, ಉಪನಿಷತ್, ಮಂಕುತಿಮ್ಮನ ಕಗ್ಗ ಹಾಗೂ ಇತರ ಆಧ್ಯಾತ್ಮಿಕ ಪ್ರವಚನಗಳು ನಾಡಿನಾದ್ಯಂತ ಅಪಾರ ಮೆಚ್ಚುಗೆ ಗಳಿಸಿದೆ.

ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಪ್ರವಾಸ ಮಾಡಿ ಪ್ರವಚನ ಸತ್ಸಂಗಗಳ ಮೂಲಕ ಇಂದು ಮನೆ ಮನಗಳಲ್ಲಿ ನೆಲೆಸಿದ್ದಾರೆ. ಅವರು ತೊಟ್ಟ ಪಣ, ಅನುಭವಿಸಿದ ಕಷ್ಟಕಾರ್ಪಣ್ಯಗಳ ಫಲವಾಗಿ ಇಂದು ರಾಜ್ಯದ ಮೂಲೆ ಮೂಲೆಗಳಲ್ಲಿ ಚಿನ್ಮಯ ಸಂಸ್ಥೆಯ ಕೇಂದ್ರಗಳು, ದೇವಸ್ಥಾನಗಳು, ವಿದ್ಯಾಲಯಗಳು, ಬಾಲವಿಹಾರಗಳು, ಯುವಕೇಂದ್ರಗಳು ಹಾಗು ಸಾಧನಾ ತರಗತಿಗಳು ತಲೆ ಎತ್ತಿವೆ. ಯುವಶಕ್ತಿಯ ಬಗ್ಗೆ ಅಪಾರ ನಂಬಿಕೆ ಇರುವ ಸ್ವಾಮೀಜಿಯವರು ಅವರನ್ನು ಸಕಾರಾತ್ಮಕ ವಿಚಾರಗಳಿಂದ ಪ್ರೇರೇಪಿಸಿ ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸದಾ ಪ್ರಯತ್ನಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net