

ಚಿತ್ರದುರ್ಗ: ಭಗವತಿಯನ್ನು ಯಾರು ಆರಾಧಿಸುತ್ತಾರೋ ಅವರಿಗೆ ಆರೋಗ್ಯ, ಧನ ಸಂಪತ್ತು ದೊರಕುತ್ತದೆ ಎಂದು ಶ್ರೀ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಕಬೀರಾನಂದಾಶ್ರಮದ ಶ್ರೀ ಭಗವತಿ ಬಗಳಾಂಬಿಕಾದೇವಿ ದೇವಸ್ಥಾನದಲ್ಲಿ ಸೋಮವಾರ ಆಯೋಜಿಸಿದ್ದ ಚಂಡಿಕಾ ಹೋಮದ ಪೂರ್ಣಾಹುತಿ ನೀಡಿ ಮಾತನಾಡಿದರು.
ಭಗವತಿ ಆರಾಧನೆ ಎಲ್ಲದಕ್ಕಿಂತಲೂ ಶ್ರೇಷ್ಠವಾದದು. ನಮ್ಮ ತಪ್ಪುಗಳನ್ನು ಮನ್ನಿಸಿ ನಮ್ಮನ್ನು ಸರಿ ದಾರಿಗೆ ಕರೆದುಕೊಂಡು ಹೋಗುವವಳು ತಾಯಿಯಾಗಿದ್ದಾಳೆ. ವಿಜಯದಶಮಿ ಈ ಸಂದರ್ಭದಲ್ಲಿ ಚಂಡಿಕಾಯಾಗ ನಡೆಸಲಾಗಿದೆ ಎಂದರು.
ಅರ್ಚಕ ಸುಬ್ಬರಾಯ ಭಟ್ ಚಂಡಿಕಾ ಯಾಗ ನೆರವೇರಿಸಿದರು. ಗಣಪತಿಶಾಸ್ತ್ರಿ, ತಿಪ್ಪೇಸ್ವಾಮಿ ಮತ್ತಿತರರು ಇದ್ದರು. ತಾಯಿ ಶ್ರೀ ಭಗವತಿ ಬಗಳಾಂಬಿಕಾದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
--