ಭಗವಾ ಧ್ವಜ ಹಾರಿಸಲು ಅನುಮತಿಸಲಿ

4
ಎಂ.ಕೆ.ಹುಬ್ಬಳ್ಳಿಯಲ್ಲಿ ಮಂಗಳವಾರ ವಿಶ್ವಹಿಂದು ಪರಿಷತ್ ಕಾರ್ಯಕರ್ತರು ತಹಸೀಲ್ದಾರ್ ರವೀಂದ್ರ ಹಾದಿಮನಿ ಅವರಿಗೆ ಮನವಿ ಸಲ್ಲಿಸಿದರು. ಪುಂಡಲೀಕ ದಳವಾಯಿ, ಸಂತೋಷ ಮಾದಿಗರ, ಆನಂದ ಕರಲಿಂಗಣ್ಣವರ, ಕೃಷ್ಣಾ ಭಟ್ ಇತರರಿದ್ದರು.
Published on

ಎಂ.ಕೆ.ಹುಬ್ಬಳ್ಳಿ: ಪಟ್ಟಣದ ಸಂಬಣ್ಣವರ ಓಣಿಯ ಹನುಮಂತನ ದೇವಸ್ಥಾನದ ಮುಂಭಾಗದಲ್ಲಿ ತೆರವು ಮಾಡಲಾದ ಭಗವಾ ಧ್ವಜ ಮರುಹಾರಿಸಲು ಅನುಮತಿ ನೀಡಬೇಕು ಎಂದು ಮಂಗಳವಾರ ವಿಶ್ವ ಹಿಂದು ಪರಿಷತ್, ಬಜರಂಗದಳದ ಪದಾಧಿಕಾರಿಗಳು ಕಿತ್ತೂರು ತಹಸೀಲ್ದಾರ್ ರವೀಂದ್ರ ಹಾದಿಮನಿ ಅವರಿಗೆ ಮನವಿ ಸಲ್ಲಿಸಿದರು.

ಜ.27ರಂದು ಸ್ಥಳೀಯವಾಗಿ ನಡೆದಿದ್ದ ಘಟನೆಗೆ ಕಾರಣವೇನು ಎಂದು ತಿಳಿಯುವ ಮುನ್ನವೇ ಎಂಕೆ ಹುಬ್ಬಳ್ಳಿ ಪಟ್ಟಣದಲ್ಲಿದ್ದ ಎಲ್ಲ ಹಿಂದುಗಳ ಮನೆ ಮೇಲಿದ್ದ ಭಗವಾ ಧ್ವಜ ತೆರವು ಮಾಡಿದ್ದು ಎಷ್ಟು ಸರಿ?. ಇದರಿಂದ ಹಿಂದುಗಳ ಭಾವನೆಗಳಿಗೆ ಧಕ್ಕೆಯಾಗಿದೆ. ಧ್ವಜ ತೆರವು ಮಾಡಿದ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಮತ್ತೆ ಭಗವಾ ಧ್ವಜ ಹಾರಿಸಲು ಅನುಮತಿ ನೀಡಬೇಕು. ನೀಡದಿದ್ದರೆ ಎಂ.ಕೆ.ಹುಬ್ಬಳ್ಳಿ ಚಲೋ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪುಂಡಲೀಕ ದಳವಾಯಿ, ಸಂತೋಷ ಮಾದಿಗರ, ಆನಂದ ಕರಲಿಂಗಣ್ಣವರ, ಕೃಷ್ಣಾ ಭಟ್, ಪ್ರಮೋದಕುಮಾರ ವಕ್ಕುಂದಮಠ, ಶಿವಾನಂದ ಶಿವನಗುಡಿ, ನಾಗಪ್ಪ ತುಬಾಕಿ, ವಿವೇಕ ಪೂಜಾರ, ನಂದೀಶ ಶಹಪುರಮಠ, ಕಾಶೀನಾಥ ಬಿರಾದಾರ, ಡಾ.ಜಗದೀಶ ಹಾರುಗೊಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net