ಭಗತ್‌ಸಿಂಗ್ ಕನಸಿನ ಭಾರತದ ಸಂಕಲ್ಪ

2809klb07
Published on

ಕಲಬುರಗಿ: ಬ್ರಿಟಿಷರ ವಿರುದ್ಧ ಹೋರಾಡಿ ಕಿರಿಯ ವಯಸ್ಸಿನಲ್ಲೇ ಗಲ್ಲಿಗೇರಿದ ಹುತಾತ್ಮ ಭಗತ್‌ಸಿಂಗ್ ಯುವಕರಿಗೆ ಸದಾ ಸ್ಫೂರ್ತಿಯಾಗಿದ್ದು, ಮಾನವನಿಂದ ಮಾನವ ಶೋಷಣೆ ಮುಕ್ತಿಗೊಳಿಸಿ ಸಮ ಸಮಾಜದ ನಿರ್ಮಾಣ ಕಟ್ಟುವ ಕನಸು ನನಸಲು ಮಾಡುವ ಸಂಕಲ್ಪ ಹೊಂದಬೇಕು ಎಂದು ಎಐಎಸ್‌ಒ ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್.ಕೆ. ಹೇಳಿದರು.
ನಗರದ ಎಐಡಿಎಸ್‌ಒ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಕ್ರಾಂತಿಕಾರಿ ಭಗತಸಿಂಗ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿಗೂ ಭಗತ್‌ಸಿಂಗ್ ಕನಸು ನನಸಾಗಿಲ್ಲ. ಕೆಟ್ಟ ಸ್ಥಿತಿಯಲ್ಲಿ ದೇಶ ಸಾಗುತ್ತಿದೆ. ಶಿಕ್ಷಣ ಖಾಸಗೀಕರಣವಾಗಿ ವ್ಯಾಪಾರದ ಸರಕಾಗಿದೆ. ನಿರುದ್ಯೋಗ, ಬಡತನ ತಾಂಡವವಾಡುತ್ತಿದೆ. ಕೆಳ ಮಧ್ಯಮ ವರ್ಗದ ಜನರು ಕನಿಷ್ಠ ಜೀವನ ನಡೆಸಲು ತತ್ತರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಅನ್ಯಾಯ, ಅಕ್ರಮದ ವೇಳೆಯಲ್ಲಿ ಯುವಕರು ಪ್ರಶ್ನಿಸುವ ಆದರ್ಶವನ್ನು ಮೈಗೂಡಿಸಿಕೊಂಡು ಸಮಸ್ಯೆಗಳ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಮುಂದಾಗಬೇಕು. ಆಗ ಮಾತ್ರ ಭಗತಸಿಂಗ್‌ರಿಗೆ ನೈಜ ಗೌರವ ಸಲ್ಲಿಸಿದಂತೆ ಆಗುತ್ತದೆ ಎಂದರು.
ಜಿಲ್ಲೆಯಾದ್ಯAತ ಸಾರ್ವಜನಿಕ ಸ್ಥಳಗಳಲ್ಲಿ, ಉದ್ಯಾನವನ ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಸಲಾಯಿತು. ಜಿಲ್ಲಾ ಖಜಾಂಚಿ ವೆಂಕಟೇಶ ದೇವದುರ್ಗ, ಉಪಾಧ್ಯಕ್ಷರಾದ ಪ್ರೀತಿ ದೊಡ್ಡಮನಿ, ಗೋವಿಂದ ಯಳವಾರ, ನಾಗರಾಜ ರಾವೂರ, ಸದಸ್ಯರಾದ ರಾಹುಲ್, ಯುವರಾಜ, ಭೀಮಾಶಂಕರ, ಸುನೀಲ್, ಅಭಿಷೇಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net