

ಚಾಮರಾಜನಗರ: ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರ ಹೋರಾಟ ಮಾಡಿದ ಭಗತ್ ಸಿಂಗ್ ಅವರ ದೇಶಪ್ರೇಮ ಪ್ರತಿಯೊಬ್ಬರಿಗೂ ಅನುಕರಣೀಯ ಎಂದು ಸಂಸ್ಕೃತಿ ಚಿಂತಕ ಸುರೇಶ್ ಎನ್.ಋಗ್ವೇದಿ ತಿಳಿಸಿದರು.
ತಾಲೂಕಿನ ಬ್ಯಾಡಮೂಡ್ಲು ಗ್ರಾಮದಲ್ಲಿ ಭಗತ್‌ಸಿಂಗ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಭಗತ್ ಸಿಂಗ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ದೇಶಪ್ರೇಮಿ ಭಗತ್‌ಸಿಂಗ್ ಅವರು ದೇಶಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಿಸಿಕೊಂಡ ಮಹಾತ್ಯಾಗಿಯಾಗಿದ್ದಾರೆ. ಭಗತ್ ಸಿಂಗ್ ಬಾಲ್ಯದಿಂದಲೂ ಬ್ರಿಟಿಷರ ವಿರುದ್ಧವಾಗಿ ಹೋರಾಟ ಮಾಡುವ ಮನೋಭಾವನೆಯನ್ನು ಹೊಂದಿದ್ದರು. ಕೇವಲ 23 ವರ್ಷದಲ್ಲೇ ಗಲ್ಲಿಗೇರುವ ಮೂಲಕ ದೇಶಕ್ಕಾಗಿ ತನ್ನ ಪ್ರಾಣವನ್ನೇಅರ್ಪಿಸಿಕೊಂಡ ಮಹಾವ್ಯಕ್ತಿ .ಕೋಟ್ಯಾಂತರ ಭಾರತೀಯ ಯುವಕರ ಹೃದಯದಲ್ಲಿ ಭಗತ್ ಸಿಂಗ್ ನೆಲೆಸಿದ್ದಾರೆ ಎಂದರು.
ಮುಖಂಡ ಪಿ.ವೃಷಭೇಂದ್ರಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅಭಿವೃದ್ಧಿಗಾಗಿ ಪಣ ತೊಡಬೇಕು. ಉನ್ನತ ಶಿಕ್ಷಣವನ್ನು ಪಡೆದು ಗ್ರಾಮದ ಅಭಿವೃದ್ಧಿಗೆ ಸದಾಕಾಲ ಕ್ರಿಯಾಶೀಲರಾಗಿ ಉತ್ತಮ ಕಾರ್ಯಗಳನ್ನು ನೆರವೇರಿಸಿ ಎಂದರು.
ಈ ಸಂದರ್ಭದಲ್ಲಿ ಜನಪದ ಗಾಯಕ ದೊಡ್ಡಗವಿಬಸಪ್ಪ, ಪರಿಸರ ಪ್ರೇಮಿ ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಶಮಿತ್ ಕುಮಾರ್, ಪೊಲೀಸ್ ಇಲಾಖೆಯ ಮಹದೇವಸ್ವಾಮಿ, ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಹದೇವಶೆಟ್ಟಿ, ಗ್ರಾಮದ ಮುಖಂಡ ಬಂಗಾರು, ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ದೊಡ್ಡಮೋಳೆ, ಮುರುಗೇಶ್, ನಂಜುಂಡಶೆಟ್ಟಿ ಹಾಜರಿದ್ದರು.