

ಚಾಮರಾಜನಗರ: ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ ಯಶಸ್ವಿ ಹಿನ್ನೆಲೆಯಲ್ಲಿ ನಗರದಲ್ಲಿ ಭಗತ್ ಯುವ ಸೇನೆ ವತಿಯಿಂದ ಸಂಭ್ರಮಾಚರಣೆ ನಡೆಸಲಾಯಿತು.
ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಶ್ರೀ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ, ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದರು. ಭಗತ್ ಯುವ ಸೇನೆ ಅಧ್ಯಕ್ಷ ಶಿವು ವಿರಾಟ್ ಮಾತನಾಡಿ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನದ ಉಗ್ರರು ಅಮಾಯಕ ಹಿಂದುಗಳನ್ನು ಭೀಕರವಾಗಿ ಹತ್ಯೆ ಮಾಡಿದ್ದರು. ಈ ಕೃತ್ಯದಲ್ಲಿ ಪತಿಯನ್ನು ಕಳೆದುಕೊಂಡ ಮಹಿಳೆಗೆ ಉಗ್ರಗಾಮಿ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರಿಗೆ ಹೇಳು ಎಂದಿದ್ದನಂತೆ. ಭಾರತವನ್ನು ಸಂಪೂರ್ಣ ಇಸ್ಲಾಮಿಕ್ ರಾಷ್ಟ್ರ ಮಾಡಲಾಗುವುದಿಲ್ಲ ಎಂದು ಉಗ್ರರಿಗೆ ಪ್ರಧಾನಿ ಮೋದಿ ಬುದ್ಧಿ ಕಲಿಸಿದ್ದಾರೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಷ್ಟು ದಿನ ಮೌನವಾಗಿ ಇದ್ದುಕೊಂಡೇ ವಿಶ್ವದ ಇತರ ದೇಶಗಳ ವಿಶ್ವಾಸ ಗಳಿಸಿದರು. ನಂತರ ಪಾಕಿಸ್ತಾನದ ಮುಖವಾಡ ಬಯಲಿಗೆಳೆದರು. ದೇಶದಲ್ಲಿ ಮಾಕ್ ಡ್ರಿಲ್ ನಡೆಯುತ್ತಿದೆ ಎನ್ನುವಾಗಲೇ ಪಾಕಿಸ್ತಾನದಲ್ಲಿ ರಾತ್ರೋರಾತ್ರಿ ಆಪರೇಷನ್ ಸಿಂದೂರ ನಡೆದಿದೆ. ಪ್ರಧಾನ ಮಂತ್ರಿ ತೆಗೆದುಕೊಂಡಿರುವ ನಿರ್ಧಾರವನ್ನು ಕಾರ್ಯಗೊಳಿಸಿದ್ದಾರೆ. ಆದರೆ ವಿಕೃತ ಮನಸ್ಸುಗಳು ಹಿಂದುಗಳ ಮೇಲಿನ ದಾಳಿಯನ್ನು ಸಂಭ್ರಮಿಸಿದ್ದರು. ಪಾಕಿಸ್ತಾನದವರು ಭಾರತ ಬಿಟ್ಟು ಹೋಗಬೇಕು ಎಂದು ಹೇಳಿದರು.
ನಗರಸಭಾ ಮಾಜಿ ಸದಸ್ಯ ಶಿವಣ್ಣ, ರಾಜು ಭಕ್ತಿ, ಸತೀಶ್, ಬಂಗಾರ ನಾಯಕ, ಕೃಷ್ಣ ಪಾಪು, ಪ್ರದೀಪ್, ಕುಮಾರ್, ಕಿರಣ್, ಬುಲೆಟ್ ಚಂದ್ರು, ಮಣಿ, ರಾಹುಲ್, ನಿಖಿಲ್, ಪ್ರವೀಣ್, ಪೃಥ್ವಿ, ಚೇತನ್ ನಾಯಕ, ಮಹೇಶ್, ಪುನೀತ್, ರಾಜೇಂದ್ರ, ಹರೀಶ್, ಮಂಜು, ಪ್ರಸನ್ನ ಭಗತ್, ಲೋಹಿತ್, ಪುನೀತ್, ಭಾನುಪ್ರಕಾಶ್ ಇತರರು ಭಾಗವಹಿಸಿದ್ದರು.