ಭಕ್ತಿಯಿಂದ ಪೂಜಿಸಿದಾಗ ಮಾತ್ರ ಪುಣ್ಯ ಪ್ರಾಪ್ತಿ

17-06KKR-01
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
Published on

ಕಕ್ಕೇರಾ: ಜಗತ್ತಿನಲ್ಲಿರುವ ಎಲ್ಲ ದೇವರು ಒಂದೆ. ಹೀಗಾಗಿ ಎಲ್ಲ ಧರ್ಮಿಯರು ತಮಗೆ ಇಷ್ಟವಾದ ದೇವರಿಗೆ ಭಯ-ಭಕ್ತಿಯಿಂದ ಪೂಜಿಸಿದಾಗ ಮಾತ್ರ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಸೇಡಂ ತಾಲೂಕಿನ ಮಳಖೇಡದ ಹಜರತ್ ಸೈಯದ್ ಶಹಾ ಮುಸ್ತಫಾ ಖಾದ್ರಿ ಹೇಳಿದರು.

ಬಂಡೊಳ್ಳಿ ಸೀಮಾಂತರದಲ್ಲಿ ಸೋಮವಾರ ಹಮ್ಮಿಕೊಂಡ ಹಜರತ್ ಮಹೆಬೂಬ್ ಸುಭಾನಿ ಛಿಲ್ಲಾ ಅಶೋರ ಖಾನಾ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಜನರಲ್ಲಿ ವಿಷದ ಬೀಜ ಬಿತ್ತುವ ಮೂಲಕ ಅಶಾಂತಿ ಮೂಡಿಸುತ್ತಿರುವುದು ಖೇದದ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ದೇಶದ ಎಲ್ಲ ಧರ್ಮಿಯರಲ್ಲಿರುವ ರಕ್ತ ಒಂದೇ ಎನ್ನುವ ಭಾವದೊಂದಿಗೆ ಮುನ್ನಡೆದಾಗ ಮಾತ್ರ ಎಲ್ಲರಲ್ಲಿ ಭಾವೈಕ್ಯತೆಯ ಭಾತೃತ್ವ ಬೆಳೆಯುತ್ತದೆ. ಅಲಾಹೀ ದೇವರು ಹೇಳುವವರು, ಕುದುರೆಕಾರರು, ಸಂತ-ಶರಣರು ಸೇರಿ ಅನೇಕರು ಸುಖಾಸುಮ್ಮನೆ ಮೈಯಲ್ಲಿ ದೇವರು ಬಂದಿದೆ ಎಂದು ಮುಗ್ದ ಜನರ ಮನಸ್ಸಿನೊಂದಿಗೆ ಚಲ್ಲಾಟವಾಡಬೇಡಿ ಎಂದು ಹೇಳಿದರು.

ಶರಣ ಚಿಂತಕ ನಿಂಗಯ್ಯಗೌಡ ಬೂದಗುಂಪಿ ಮಾತನಾಡಿ, ಸರ್ವಧರ್ಮಿಯರ ಬಡಜನರ ಉದ್ಧಾರಕ್ಕಾಗಿ ಹಾಗೂ ವೃದ್ಧರ ಆಶ್ರಯಕ್ಕಾಗಿ ಹಜರತ್ ಮಹೆಬೂಬ್ ಸುಭಾನಿ ಛಿಲ್ಲಾ ಅಶೋರ ಖಾನಾ ನಿರ್ಮಿಸುವಲ್ಲಿ ಹಜರತ್ ದಸ್ತಗೀರಸಾಹೇಬ್ ಶ್ಯಾನಿ ಹಾಗೂ ಅಲ್ಲಾಭಕ್ಷ ಹೊಳಿ ಅವರು ಬಹಳಷ್ಟು ಶ್ರಮಿಸಿದ್ದಾರೆ ಎಂದರು.

ಕರ‍್ಯಕ್ರಮಕ್ಕೂ ಮುನ್ನ ಬಂಡೊಳ್ಳಿ ಗ್ರಾಮದ ಮಸೀದಿಯಿಂದ ಕಳಸವನ್ನು ಶರಣಗೌಡರ ನೇತೃತ್ವದಲ್ಲಿ ವಾದ್ಯಮೇಳದೊಂದಿಗೆ ದರ್ಗಾದವರೆಗೆ ಅದ್ದೂರಿ ಮೆರವಣಿಗೆ ಮೂಲಕ ತರಲಾಯಿತು. ಚನ್ನಪಟ್ಟಣದ ಸೈಯದ್ ಖಲೀಲುಲ್ಲಾ ಖಾದ್ರಿ ದರ್ಗಾದ ಧ್ವಜ ನೆರವೇರಿಸಿ ಕಳಸಾರೋಹಣ ಮಾಡಲಾಯಿತು.

ನಂದಣ್ಣಪ್ಪ ಪೂಜಾರಿ, ಮೌನೇಶ್ವರ ಸ್ವಾಮೀಜಿ, ಭೀಮಣ್ಣ ಮುತ್ಯಾ ಪೂಲಭಾವಿ, ರಾಜಾ ಲಕ್ಷ್ಮೀನಾರಾಯಣ ನಾಯಕ, ಹನುಮಂತರಾಯ ಜಹಾಗೀರದಾರ, ಮಹಾದೇವಮ್ಮ ನಾಯಕÀ, ಪುರಸಭೆ ಅಧ್ಯಕ್ಷ ಸಣ್ಣ ಅಯ್ಯಾಳಪ್ಪ ಬಡಿಗೇರ, ಗುಂಡಪ್ಪ ಸೊಲಾಪುರ, ಭೀಮರಾಯ ಮೂಲಿಮನಿ, ರಾಜು ಹವಾಲ್ದಾರ್, ದೇವಿಂದ್ರಪ್ಪ ಬಳಿಚಕ್ರ, ಬಸಯ್ಯಸ್ವಾಮಿ, ಪರಮಣ್ಣ ಕಮತಗಿ ಸೇರಿ ಅನೇಕರು ಭಾಗವಹಿಸಿದ್ದರು.

ಶರೀಪ್ ಶಿವಯೋಗಿ ಸ್ವಾಗತಿಸಿದರು. ಸಿದ್ದು ನಂದಿಕೋಲಮಠ ನಿರೂಪಿದರು. ಶರಣಗೌಡ ಬಂಡೋಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net