

ಬಸವಕಲ್ಯಾಣ: ಯೇಸು ಕ್ರಿಸ್ತರನ್ನು ಯಾರು ನೆನೆಯುತ್ತಾರೆ, ಯಾರು ಆರಾಧನೆ ಮಾಡುತ್ತಿರುತ್ತಾರೆ ಅವರು ಜೀವನದಲ್ಲಿ ಶಾಂತಿ-ನೆಮ್ಮದಿ ಕಾಣುತ್ತಾರೆ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು.
ನಗರದ ತಾಜ್ ಕಾಲನಿಯ ಚರ್ಚ್ ಆಫ್ ಎಲ್-ಷಡ್ಡಾಯ್ ವರ್‌ಶೀಫ್ ಸೆಂಟರ್‌ನಲ್ಲಿ ಬುಧವಾರ ಕ್ರಿಸ್‌ಮಸ್ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೀತಿ ಮಾರ್ಗದಲ್ಲಿ ನಡೆಯಬೇಕು. ದೇವರಲ್ಲಿ ಭಕ್ತಿಯಿಂದ ನಡೆಯಬೇಕು. ಅಂದಾಗ ಜೀವನದಲ್ಲಿ ಬರುವ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಭಕ್ತಿ ಇದ್ದಲ್ಲಿ ಶಕ್ತಿ ಇರುತ್ತದೆ. ಅಲ್ಲಿ ವಿಶ್ವಾಸವಿರುತ್ತದೆ. ಪಕ್ಷ ಯಾವುದೆ ಇರಲ್ಲಿ ಎಲ್ಲರೂ ಸೇರಿ ಇಲ್ಲಿ ಪ್ರಾರ್ಥನೆಗಾಗಿ ಒಂದು ಭವನ ನಿರ್ಮಾಣ ಮಾಡಬೇಕು. ಅಗತ್ಯವಿರುವ ಸೌಕರ್ಯಗಳನ್ನು ಕಲ್ಪಿಸಲು ಎಲ್ಲರೂ ಸೇರಿ ಪ್ರಯತ್ನಿಸಬೇಕಿದ್ದು, ಇದಕ್ಕಾಗಿ ತಮ್ಮ ಸಹಕಾರ ಸದಾ ಇರಲಿದೆ ಎಂದು ಭರವಸೆ ನೀಡಿದರು.
ಮುಖಂಡ ಅರ್ಜುನ ಕನಕ ಮಾತನಾಡಿ, ಈ ಚರ್ಚ್ನಲ್ಲಿ ನಾಡಿನ ಒಳತಿಗಾಗಿ ಎಲ್ಲ ಭಕ್ತರು ಯೇಸು ಕ್ರಿಸ್ತರಲ್ಲಿ ಪ್ರಾರ್ಥನೆ ಮಾಡುತ್ತಾರೆ. ದೇವರನ್ನು ಯಾರು ಪ್ರೀತಿಸುತ್ತಾರೆ ಯಾರು ಈ ನಾಡಿಗಾಗಿ ಪ್ರೀತಿಸುತ್ತಾರೆ ಅಂತವರಿಗೆ ಒಳ್ಳೆಯದಾಗಲಿ ಎಂದು ಪ್ರತಿ ಭಾನುವಾರ ಮಾಡುತ್ತಾರೆ ಎಂದು ಹೇಳಿದರು.
ಪಾಸ್ಟರ್ ರಾಜು ರೂಬೇನ್ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಫಾದರ್ ಜಾರ್ಜ್, ಹುಲಸೂರು ತಹಸೀಲ್ದಾರ್ ಶಿವಾನಂದ ಮೇತ್ರೆ, ಕಾಂಗ್ರೆಸ್ ಮುಖಂಡ ಬಾಬುಹೊನ್ನಾ ನಾಯಕ. ಜೆಡಿಎಸ್ ತಾಲೂಕು ಕಾರ್ಯಧ್ಯಕ್ಷ ಆಕಾಶ ಖಂಡಾಳೆ ಮಾತನಾಡಿದರು.
ನಗರಸಭೆ ಸದಸ್ಯೆ ನಾಹೇದಾ ಸುಲ್ತಾನಾ, ಮಾಜಿ ಸದಸ್ಯೆ ಕರುಣಾಬಾಯಿ ಗ್ಯಾನೋಬ, ಪತ್ರಕರ್ತ ಕಲ್ಯಾಣರಾವ ಮದರಗಾಂವಕರ್, ಶಿವಪುರನ ವಿಜಯಕುಮಾರ ಕಮಲಾಪೂರಕರ್, ಶಿಕ್ಷಕರಾದ ಪ್ರೇಮಸಿಂಗ ರಾಠೋಡ್, ಡಾ. ಜಿಯಾವುದ್ದಿನ್, ಅಂಬ್ರೇಷ, ಆಕಾಶ, ರಾಹುಲ್, ಸಕುಬಾಯಿ ಕೆಂಚೆ, ಸಂಪತಕುಮಾರ, ನಿರ್ಮಲಾಬಾಯಿ, ಪಾಸ್ಟರ ಕಾಜಲ, ಸುಮಾ, ಆಶಾ, ಮೇಗಾರಾಣಿ, ಅಂಕಿತಾ, ಕೃತಿಕಾ ಇತರರಿದ್ದರು.