

ಕಳಸ: ದೇವರ ಮೇಲೆ ಅಪಾರ ಭಕ್ತಿ ಇರುವುದರಿಂದ ನನಗೆ ಸಾಧ್ಯವಾದಷ್ಟು ದೇವರ ಸೇವೆ ಮಾಡುತ್ತೇನೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಕಳಸ ಅರಮನೆಮಕ್ಕಿ ಮೈದಾನದ ಸಾರ್ವಜನಿಕ ಸೌಹಾರ್ದ ಶ್ರೀ ಗಣೇಶೋತ್ಸವದಲ್ಲಿ ಮಾತನಾಡಿದ ಅವರು, ನಾವು ದೇವರನ್ನು ಮುಂದಿಟ್ಟುಕೊಂಡು ಕೆಲಸಗಳನ್ನು ಪ್ರಾರಂಭಿಸುತ್ತೇವೆ. ಸಾರ್ವಜನಿಕವಾಗಿ ದೇವರ ಸೇವೆಯನ್ನು ಸೌಹಾರ್ದವಾಗಿ ಮಾಡುತ್ತಿರುವುದು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತದೆ. ಇದರಿಂದ ಸಮಾಜದಲ್ಲಿ ಬದಲಾವಣೆಗಳನ್ನು ಮಾಡಲು ಸಾಧ್ಯ ಎಂದು ಹೇಳಿದರು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ರವಿ ರೈ, ಬ್ರಹ್ಮದೇವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಶ್ರೇಣಿಕ್, ಕೆಪಿಸಿಸಿ ಸದಸ್ಯ ಕೆ.ಆರ್.ಪ್ರಭಾಕರ್, ತಾಪಂ ಮಾಜಿ ಸದಸ್ಯರಾದ ರಾಜೇಂದ್ರ ಹೆಬ್ಬಾರ್, ಮಹಮ್ಮದ್ ರಫೀಕ್, ಕಾಂಗ್ರೆಸ್ ಯೂತ್ ಅಧ್ಯಕ್ಷ ರಾಮದೇವ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಗಣೇಶ್ ಭಟ್, ಅಬ್ದುಲ್ ಶುಕುರು ಇತರರಿದ್ದರು.