ಭಕ್ತಿಗಿಂತ ವೈಭವೀಕರಣವೇ ಹೆಚ್ಚಾಗಿದೆ

07kkr..1
Published on

ಕಿಕ್ಕೇರಿ: ಪ್ರಸ್ತುತ ದಿನಗಳಲ್ಲಿ ಪೂಜೆಯ ವೈಭವೀಕರಣ, ರಾಜಕೀಯ ಲೇಪನ ಎಲ್ಲೆಡೆ ವಿಜೃಂಭಿಸುವಂತಾಗಿದೆ ಎಂದು ಬೆಡದಹಳ್ಳಿ ಪಂಚಭೂತೇಶ್ವರ ಪೀಠದ ರುದ್ರಮುನಿ ಸ್ವಾಮೀಜಿ ತಿಳಿಸಿದರು.


ಹೋಬಳಿಯ ಮಾದಾಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶನಿವಾರ ಸಾಮೂಹಿಕ ಸತ್ಯನಾರಾಯಣ ಪೂಜೆ, ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.


ಭಕ್ತಿಯ ಆರಾಧನೆ ಮಹತ್ವವನ್ನು ಸಾಮೂಹಿಕವಾಗಿ ಮಾಡುವ ಪರಿಕಲ್ಪನೆಯನ್ನು ಧರ್ಮಸ್ಥಳದ ಶ್ರೀವೀರೇಂದ್ರ ಹೆಗ್ಗಡೆ ತೋರಿಸಿಕೊಟ್ಟಿದ್ದಾರೆ. ಅವಶ್ಯಕತೆ, ಅನಿವಾರ್ಯಕ್ಕೆ ತಕ್ಕಂತೆ ಬೇಕಿರುವ ಹಣ ಕೂಡಿಸಿಕೊಳ್ಳುವ ಮಾರ್ಗವನ್ನು ಸಂಘ, ಒಕ್ಕೂಟದ ಮೂಲಕ ಸಂಸ್ಥೆ ನೀಡಿ, ಜತೆಗೆ ಸಂಸ್ಕಾರ, ಧರ್ಮ ಉಳಿವಿಗೆ ಧಾರ್ಮಿಕ ಜಾಗೃತಿ ಮೂಡಿಸಿ, ಗ್ರಾಮೀಣ ಪ್ರದೇಶದಲ್ಲಿ ಸಾಮರಸ್ಯ ರೂಪಿಸಲು ಮುಂದಾಗಿದೆ ಎಂದರು.


ರಾಜಕೀಯ ಇಂದು ಧಾರ್ಮಿಕ ಕ್ಷೇತ್ರಕ್ಕೂ ನುಸುಳುತ್ತಿದ್ದು, ಪರಂಪರೆ, ಹಳೆಯ ದೇಗುಲಗಳ ಅಭಿವೃದ್ಧಿಗೂ ರಾಜಕೀಯ ಪ್ರಭಾವ ಅವಶ್ಯ ಎನ್ನುವಷ್ಟು ಹಾಳಾಗಿದೆ ಎಂದು ಬೇಸರಿಸಿದರು.
ವಕೀಲ ಎಂ.ಆರ್. ರಾಜೇಶ್ ಮಾತನಾಡಿದರು. ತಾಲೂಕು ಯೋಜನಾಧಿಕಾರಿ ಎಂ. ವೀರೇಶಪ್ಪ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net