ಭಕ್ತಿ ಸಂಜೀವಿನಿ ಕೂಟಕ್ಕೆ ತೆರೆ

Ghodampalli Bhakti Sanjeevini Koot photo
Published on

ಬೀದರ್: ತಾಲ್ಲೂಕಿನ ಘೋಡಂಪಳ್ಳಿ ಗ್ರಾಮದಲ್ಲಿ ಮೂರು ದಿನಗಳ ಭಕ್ತಿ ಸಂಜೀವಿನಿ ಕೂಟ ಸಂಭ್ರಮದೊಂದಿಗೆ ತೆರೆ ಕಂಡಿತು. ವಿವಿಧ ಗ್ರಾಮಗಳ ನೂರಾರು ಜನ ಕೂಟದಲ್ಲಿ ಆಸಕ್ತಿಯಿಂದ ಪಾಲ್ಗೊಂಡು, ಧರ್ಮಗುರುಗಳ ವಾಣಿ ಆಲಿಸಿದರು.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜಯ್ ಜಾಗೀರದಾರ್ ಹಾಗೂ ಚಿಟ್ಟಾ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಸದಸ್ಯರನ್ನು ಸನ್ಮಾನಿಸಲಾಯಿತು. ಪಾಸ್ಟರ್‍ಗಳಾದ ಸಲೋಮನ್‍ರಾಜ್, ಕುಮಾರ ನಾಯಕ್, ಕಲನಾಯಕ್, ಪಿ. ಶೈಲೇಶಕುಮಾರ, ಸುನೀಲಕುಮಾರ, ಪ್ರಮುಖರಾದ ಅಮೃತ, ಇಮ್ಯಾನುಯೆಲ್, ರಾಬರ್ಟ್, ವಿಜಯಕುಮಾರ, ರಾಮಣ್ಣ, ಪ್ರಭು, ಜೈಪಾಲ್, ಜಾನ್ಸನ್, ಅಂಬಣ್ಣ, ರಾಜರೆಡ್ಡಿ ಚುಡಾ, ಪ್ರಭು ರೆಡ್ಡಿ, ತುಕಾರಾಮ ಗಂಗೋರೆ, ರಾಜಕುಮಾರ, ಸಂತೋಷ ರೆಡ್ಡಿ, ಪ್ರವೀಣ, ನರಸಪ್ಪ, ರಾಜು ನಾಗೋರೆ, ಶಿವಕುಮಾರ, ಶಿವಶಾಂತ, ಅಶೋಕ, ಶಿವಕುಮಾರ ಸ್ವಾಮಿ, ತುಕಾರಾಮ, ನಾಗೇಶ ಮೊದಲಾದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net