

ಬಸವಕಲ್ಯಾಣ: ಮಠ -ಮಂದಿರಗಳು ಮನಸ್ಸಿಗೆ ಶಾಂತಿ ನೀಡುವ ಪವಿತ್ರ ತಾಣಗಳು. ದೇವರಲ್ಲಿ ಭಕ್ತಿ ಶ್ರದ್ಧೆ ಇದ್ದಾಗ ಜೀವನದಲ್ಲಿ ನೆಮ್ಮದಿ ಹಾಗೂ ಸಾರ್ಥಕತೆ ಕಾಣಲು ಸಾಧ್ಯ ಎಂದು ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.
ನಗರದ ಶ್ರೀ ಸಂಗಮೇಶ್ವರ ಬಡಾವಣೆಯಲ್ಲಿ ಶ್ರೀ ಸಂಗಮೇಶ್ವರ ದೇವಸ್ಥಾನದ ಕಳಸಾರೋಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಭಾರತೀಯ ಸಂಸ್ಕೃತಿಯಲ್ಲಿ ಕಳಸಾರೋಹಣಕ್ಕೆ ಅತ್ಯಂತ ಮಹತ್ವವಿದೆ. ನಾವೆಲ್ಲರೂ ಒಂದು ಎನ್ನುವ ಭಾವನೆಯಿಂದ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಇಂಥ ಪವಿತ್ರ ಕಾರ್ಯ ನಡೆಯುತ್ತವೆ ಎಂದರು.
ಸಹಾಯಕ ಆಯುಕ್ತ ಪ್ರಕಾಶ ಕುದರಿ ಮಾತನಾಡಿ, ಅಭಿವೃದ್ಧಿ ಕೆಲಸಗಳಿಗೆ ಎಲ್ಲರ ಸಹಕಾರ ಮುಖ್ಯ. ಭಕ್ತಿ-ಶ್ರದ್ಧೆಯಿಂದ ನೆಮ್ಮದಿ ಕಾಣಲು ಸಾಧ್ಯ ಎಂದರು.
ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ, ಮುಖಂಡ ಬಾಬು ಹೊನ್ನಾನಾಯಕ ಮಾತನಾಡಿ, ಭಕ್ತರ ಸಹಕಾರದಿಂದ ಕಳಸಾರೋಹಣ ವೈಭವಪೂರ್ಣವಾಗಿ ನಡೆದಿದೆ. ಎಲ್ಲರೂ ಒಂದಾಗಿ ಕಾರ್ಯಕ್ರಮ ಯಶಸ್ವಿಗೆ ಕೆಲಸ ಮಾಡಲಾಗಿದೆ. ಕಾಲನಿ ಅಭಿವೃದ್ಧಿಗೆ ಎಲ್ಲರೂ ಕೂಡಿ ಶ್ರಮಿಸೋಣ ಎಂದರು.
ಕಮಿಟಿ ಉಪಾಧ್ಯಕ್ಷ ಎ,ಜಿ.ಪಾಟೀಲ್ ಮಾತನಾಡಿದರು. ಸಹ ಕಾರ್ಯದರ್ಶಿ ಶ್ರೀಶೈಲ ಹುಡೇದ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಾರ್ಥಂಡ ಜೋಶಿ, ಪ್ರಮುಖರಾದ ಸಂತೋಷ ಚಪಾತೆ, ಮುರಗಯ್ಯ ವಸ್ತçದ, ನಾಗಯ್ಯ ಸ್ವಾಮಿ, ರಾಮಚಂದ್ರ ಹುಡಗೆ, ವಿಜಯಕುಮಾರ ಗರುಡಕರ, ಬಸವತಂಪ್ಪ ಲವಾರೆ, ವಿರುಪಾಕ್ಷಯ್ಯ ಸಾಲಿ, ನಾಗಮ್ಮ ಭೂರೆ, ನಾಗಮ್ಮ ಖಂಡಾಳೆ ಇತರರಿದ್ದರು. ರಮೇಶ ರಾಜೋಳೆ ನಿರೂಪಣೆ ಮಾಡಿದರು.