ಭಕ್ತರೇ ಮಠದ ನಿಜವಾದ ಆಸ್ತಿ

29AFZ02
ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರ ಜನ್ಮ ವರ್ಧಂತಿ ನಿಮಿತ್ತ ಭಕ್ತರು ಅಫಜಲಪುರ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಿದರು. ಮಳೇಂದ್ರ ಡಾಂಗೆ, ಶೈಲೇಶ ಗುಣಾರಿ, ಬಸವರಾಜ ವಾಳಿ ಇತರರಿದ್ದರು.
Published on

ಅಫಜಲಪುರ: ಪಟ್ಟಣದ ಶ್ರೀಗುರು ಮಳೇಂದ್ರ ಮಠದ ಪೀಠಾಧಿಪತಿ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರ ಜನ್ಮ ವರ್ಧಂತಿಯನ್ನು ಭಕ್ತರು ಇಲ್ಲಿನ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಸೋಮವಾರ ಹಣ್ಣು ಹಂಪಲು, ಬಸ್ ನಿಲ್ದಾಣದಲ್ಲಿ ಪ್ರಸಾದ ವಿತರಿಸುವ ಮೂಲಕ ಆಚರಿಸಿದರು. ಮಠದಲ್ಲಿ ಏರ್ಪಡಿಸಿದ್ದ ಪುರಾಣ ಕಾರ್ಯಕ್ರಮದಲ್ಲಿ ಭಕ್ತರು ತಂದಿದ್ದ ಕೇಕ್ ಕತ್ತರಿಸಿದ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ಮಠದಿಂದ ನಿರಂತರ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮ ಮಾಡಲಾಗುತ್ತಿದೆ. ಭೌತಿಕ ಸಂಪತ್ತಿಗಿAತ ನಿಷ್ಚಲ ಭಕ್ತಿಯಿಂದ ನಮ್ಮೊಂದಿಗಿರುವ ಭಕ್ತರೇ ಮಠದ ನಿಜವಾದ ಆಸ್ತಿ. ಮಳೇಂದ್ರ ಡಾಂಗೆ ಸಂಗಡಿಗರು ನಮ್ಮ ಜನ್ಮ ವರ್ಧಂತಿ ನಿಮಿತ್ತ ಬಡ, ದೀನ-ದಲಿತರಿಗಾಗಿ ಸಾಮಾಜಿಕ ಕಾರ್ಯ ಮಾಡಿರುವುದು ಶ್ಲಾಘನೀಯ. ಪವಿತ್ರ ಶ್ರಾವಣ ಮಾಸದಲ್ಲಿ ನಿತ್ಯ ಭಗವಂತನ ಆರಾಧನೆ ಮಾಡಿದರು ಕಷ್ಟಗಳೆಲ್ಲ ದೂರವಾಗಿ ಒಳಿತಾಗಲಿದೆ ಎಂದು ನುಡಿದರು. ಮಳೇಂದ್ರ ಡಾಂಗೆ, ಶೈಲೇಶ ಗುಣಾರಿ, ಬಸವರಾಜ ವಾಳಿ, ಸಂಗಣ್ಣ ಕಲಶೆಟ್ಟಿ, ಎಸ್.ಎಸ್. ಪಾಟೀಲ್, ಶಾಂತಯ್ಯ ಹಿರೇಮಠ, ಪಾಶಾ ಮಣ್ಣೂರ, ಶಿವಪುತ್ರಪ್ಪ ಬುರಲಿ, ಚಂದ್ರಕಾAತ ಇಬ್ರಾಹಿಂಪುರ, ಶರಣು ಪದಕಿ, ಗಂಗಾಧರ ಸ್ಥಾವರಮಠ, ಅಶೋಕ ಭೂತಿ, ರಾಜು ಭೂತಿ, ನಾಗರಾಜ ರಾಂಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net