

ಚಿಟಗುಪ್ಪ: ಸುಕ್ಷೇತ್ರ ಚಾಂಗಲೇರಾ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿರುವ ಸುಸಜ್ಜಿತ ಯಾತ್ರಿ ನಿವಾಸ ಕಟ್ಟಡದ ಸದುಪಯೋಗ ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಭಕ್ತಾದಿಗಳಿಗೆ ಉತ್ತಮ ಸೌಲಭ್ಯ ಒದಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ಚಾಂಗಲೇರಾ ವೀರಭದ್ರೇಶ್ವರ ದೇವಸ್ಥಾನದಲ್ಲಿ ಭಾನುವಾರ ದೇವಸ್ಥಾನದ ಅನುದಾನದಡಿ ೩ ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಸುಸಜ್ಜಿತ ಯಾತ್ರಿ ನಿವಾಸ ಕಟ್ಟಡಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದ ಅವರು, ಚಾಂಗಲೇರಾಗೆ ಬೇಡಿ ಬರುವ ಭಕ್ತಾದಿಗಳ ಕಷ್ಟಗಳನ್ನು ಪರಿಹರಿಸಿ ಇಷ್ಟಾರ್ಥಗಳನ್ನು ನೀಡಿ ಹರಸುವ ಜಾಗೃತ ಪೀಠವಾಗಿದೆ. ವೀರಭದ್ರೇಶ್ವರ ದೇವಸ್ಥಾನಕ್ಕೆ ನಾಡಿನ ಹಾಗೂ ಆಂಧ್ರ, ತೆಲಂಗಾಣ, ಮಹಾರಾಷ್ಟ್ರಸೇರಿ ದೇಶ್ಯಾದಂತದ ಅಪಾರ ಭಕ್ತವೃಂದವರು ಆಗಮಿಸುತ್ತಾರೆ. ದೇವಸ್ಥಾನದಲ್ಲಿ ಯಾತ್ರಿ ನಿವಾಸ ನಿರ್ಮಿಸುವ ಮೂಲಕ ಭಕ್ತರಿಗೆ ಅನುಕೂಲ ಕಲ್ಪಿಸಿದಂತಾಗಿದೆ ಎಂದರು.
ಸ್ಥಳೀಯ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯರು, ಶ್ರೀ ಮುರಳಾರಾಧ್ಯ ಶಿವಾಚಾರ್ಯರ ಅಮೃತ ಹಸ್ತದಿಂದ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಈ ಯಾತ್ರಿ ನಿವಾಸಕ್ಕೆ ಚಾಲನೆ ನೀಡಿದ್ದು, ಭಕ್ತರು ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಮುಖಂಡರಾದ ಸೋಮನಾಥ ಪಾಟೀಲ್, ವೀರಶೆಟ್ಟಿ ಪಾಟೀಲ್ ನೌಬಾದ್, ಗುರುನಾಥ ರಾಜಗೀರಾ, ಶಿವಕುಮಾರ ಸ್ವಾಮಿ, ಉದಯಕುಮಾರ ತೋರಣ, ಚಂದ್ರಯ್ಯ ಸ್ವಾಮಿ, ವೀರಶೆಟ್ಟಿ, ಅನೀಲ ಗುನ್ನಳ್ಳಿ, ವಿಜಯಕುಮಾರ ವಾಲಿ, ಜಗನ್ನಾಥ ಬೇಡರ, ರಾಮಲು ಮಂತ್ರಿ, ಪಪ್ಪು ಸ್ವಾಮಿ, ರವಿ ಘಾರೋಲ, ಬಕ್ಕಪ್ಪ ಬಸರೆಡ್ಡಿ, ದೇವೇಂದ್ರ ಚಾಂಗಲೇರಾ, ಸುಭಾಷ, ವಿಜಯಕುಮಾರ ರಾಜಗೀರಾ, ರಾಜಶೇಖರ ಕಲ್ಯಾಣ, ಅಶೋಕ ರೆಡ್ಡಿ, ರಾಜಕುಮಾರ, ಶಿವಶರಣ, ಪ್ರಸನ್ನ ಪಾಟೀಲ್, ಶಣ್ಮೂಕಪ್ಪ, ಲಕ್ಷ್ಮಣ, ವೀರೇಶ ಪೂಜಾರಿ, ಸಂಜುಕುಮಾರ, ಬಕ್ಕಪ್ಪ, ಅಂಬ್ರೀಶ, ವಿಜಯಕುಮಾರ ಪೂಜಾರಿ, ಗೌಡಪ್ಪ ಪಾಟೀಲ, ರಮೇಶ ಗೌಳಿ, ಪ್ರವೀಣ ತರಿ, ಪರಮೇಶ ಪಾಟೀಲ್, ಸಂತೋಷ ಜಗನ್ನಾಥ, ವೀರಪ್ಪ ಇದ್ದರು.