ಭಕ್ತರಿಗೆ ಸೂಕ್ತ ಸೌಲಭ್ಯ ನೀಡಲು ಶ್ರಮಿಸಿ

03 HANUR 4
Published on

 ಶಾಸಕ ಎಂ.ಆರ್ ಮಂಜುನಾಥ್ ಸಲಹೆ

ಹನೂರು : ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಮಲೆಮಹದೇಶ್ವರ ಬೆಟ್ಟಕ್ಕೆ ಶನಿವಾರ ಭೇಟಿ ನೀಡಿದ್ದ ಶಾಸಕ ಎಂ.ಆರ್ ಮಂಜುನಾಥ್, ವಿವಿಧೆಡೆ ಪರಿಶೀಲನೆ ನಡೆಸಿ ಭಕ್ತರಿಗೆ ಸೂಕ್ತ ಸೌಲಭ್ಯಗಳನ್ನು ನೀಡುವ ಬಗ್ಗೆ ಸಿಬ್ಬಂದಿಗೆ ಸಲಹೆ, ಸೂಚನೆ ನೀಡಿದರು.

ದಾಸೋಹ ಭವನಕ್ಕೆ ತೆರಳಿದ ಶಾಸಕರು ಭಕ್ತರಿಂದ ಸಂಗ್ರಹವಾಗಿರುವ ತರಕಾರಿ ಹಾಗೂ ಪ್ರಸಾದ ವಿತರಣೆ ವ್ಯವಸ್ಥೆ ಮೇಲುಸ್ತುವಾರಿ ಸಿಬ್ಬಂದಿ ಸ್ವಾಮಿ ಅವರಿಂದ ಮಾಹಿತಿ ಪಡೆದರು. ಅಡುಗೆ ತಯಾರಿಸುವ ಸ್ಥಳದ ಶುದ್ಧತೆ ಗಮನಿಸಿದರು. ನಂತರ ಮಾತನಾಡಿದ ಅವರು, ದಾಸೋಹ ಭವನದಲ್ಲಿ ನೀಡುವ ಆಹಾರವನ್ನು ಭಕ್ತರು ಮಾದಪ್ಪನ ಮಹಾ ಪ್ರಸಾದವೆಂದು ಸವಿಯುತ್ತಾರೆ. ಆದ್ದರಿಂದ ಇದರಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಗಮನಹರಿಸಿ ಎಂದು ಸಲಹೆ ನೀಡಿದರು. ಪ್ರಸಾದ (ಆಹಾರ) ವ್ಯರ್ಥವಾಗದಂತೆ ಸಿಬ್ಬಂದಿ ನೋಡಿಕೊಳ್ಳಬೇಕು. ಶುಚಿತ್ವಕ್ಕೆ ಹೆಚ್ಚಿ ಒತ್ತು ನೀಡಬೇಕು. ಪ್ರಸಾದದಲ್ಲಿ ಭಕ್ತರಿಂದ ಯಾವುದೇ ದೂರು ಬಾರದಂತೆ ಕ್ರಮ ವಹಿಸಬೇಕು. ಈ ಮೂಲಕ ಭಕ್ತರಿಗೆ ಉತ್ತಮ ಸೇವೆ ಒದಗಿಸಲು ಶ್ರಮಿಸಬೇಕು ಎಂದು ಮಂಜುನಾಥ್ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net