ಕಾನಹೊಸಹಳ್ಳಿ: ಚಿಕ್ಕಜೋಗಿಹಳ್ಳಿಯಲ್ಲಿರುವ ಗುರುರಾಯರ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನೆ ಹಿನ್ನೆಲೆಯಲ್ಲಿ ವಿವಿಧ ಪೂಜಾಕೈಂಕರ್ಯ ನಡೆದವು. ಉಷಾಕಾಲ ಪೂಜೆ, ಅಭಿಷೇಕ, ಅಷ್ಟೋತ್ತರ ಪಾರಾಯಣ, ಮಧ್ಯಾಹ್ನ ರಂಗಪೂಜೆ, ನಂತರ ರಥೋತ್ಸವ ಜರುಗಿತು. ಭಕ್ತವೃಂದಕ್ಕೆ ಮಠದ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.