ಭಕ್ತರನ್ನು ಸೆಳೆಯುತ್ತಿರುವ ಛಾಯಾ ಭಗವತಿ

25-06kodekal01
Published on

ಕೊಡೇಕಲ್: ಗಿರಿಜಿಲ್ಲೆಯಲ್ಲಿ ಹಲವು ಪ್ರೇಕ್ಷಣೀಯ ಮತ್ತು ಪ್ರವಾಸಿ ತಾಣಗಳಿದ್ದು, ಅಸಖ್ಯಾಂತ ಪ್ರವಾಸಿಗರನ್ನು ಸೆಳೆಯುತ್ತಿರುವುದರಲ್ಲಿ ನಾರಾಯಣಪುರ ಬಳಿ ನಿಸರ್ಗ ಮಡಿಲಲ್ಲಿರುವ ಛಾಯಾ ಭಗವತಿ ಕ್ಷೇತ್ರವೂ ಕೂಡ ಒಂದಾಗಿದೆ.

ನಾರಾಯಣಪುರದ ಬಸವಸಾಗರ ಜಲಾಶಯದ ಕೆಳಭಾಗದಲ್ಲಿರುವ ಈ ಕ್ಷೇತ್ರ ಸುತ್ತಲು ಹಚ್ಚ ಹಸಿರಿನಿಂದ ತುಂಬಿಕೊAಡಿರುವ ಕೃಷ್ಣಾ ನದಿ ದಡದಲ್ಲಿ ಪ್ರಕೃತಿ ನಡುವೆ ಇರುವ ಪುರಾತನ ಮತ್ತು ಸುಂದರವಾದ ಛಾಯಾ ಭಗವತಿ ದೇವಸ್ಥಾನ ಇತ್ತೀಚಿನ ವರ್ಷಗಳಲ್ಲಿ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಕೃಷ್ಣಾ ನದಿ ತಟದಲ್ಲಿರುವ ಈ ಪುರಾತನ ದೇವಸ್ಥಾನ ಐತಿಹಾಸಿಕ ಹಿನ್ನೆಲೆ ಹೊಂದಿದ್ದು ಮತ್ತು ನೈಸರ್ಗಿಕ ಸೌಂದರ್ಯದಿAದ ಎಲ್ಲರ ಗಮನ ಸೆಳೆಯುತ್ತಿದೆ.

ಈಗಾಗಲೇ ಬಸವಸಾಗರ ಜಲಾಶಯಕ್ಕೆ ಅಪಾರ ಪ್ರಮಾಣ ನೀರಿನ ಒಳಹರಿವು ಉಂಟಾಗಿರುವ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟ ಕಾಯ್ದುಕೊಂಡು ಹೆಚ್ಚುವರಿ ನೀರು ಜಲಾಶುದ ಗೇಟುಗಳ ಮೂಲಕ ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಹೀಗಾಗಿ ನಿಸರ್ಗದ ಮಡಿಲಲ್ಲಿರುವ ಈ ದೇವಸ್ಥಾನ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಗೇಟುಗಳಿಂದ ಕೃಷ್ಣೆಯ ನರ್ತನವನ್ನು ಸಮೀಪದಿಂದ ಕಣ್ತುಂಬಿಕೊಳ್ಳಬೇಕು ಎಂದು ಜಲಾಶಯ ವೀಕ್ಷಣೆಗೆ ಬರುತ್ತಿರುವ ಪ್ರವಾಸಿಗರು ದೂರದಿಂದಲೇ ಜಲಾಶಯ ವೀಕ್ಷಣೆ ಮಾಡಿ ಛಾಯಾ ಭಗವತಿ ದೇವಸ್ಥಾನಕ್ಕೆ ಬಂದು ಇಲ್ಲಿನ ಪ್ರಗೃತಿ ಸೌಂದರ್ಯ ಕಣ್ತುಂಬಿಕೊಳ್ಳುತ್ತಿದ್ದಾರೆ.

ಛಾಯಾ ಭಗವತಿ ದೇವಸ್ಥಾನದ ಬಳಿ ಕೃಷ್ಣೆಯ ವೈಯಾರ ನೋಡುವುದೇ ಕಣ್ಣಿಗೆ ಒಂದು ಹಬ್ಬ. ತುಂಬಿ ಹರಿಯುತ್ತಿರುವ ನದಿ ಅದರ ನಡುವೆ ಅಲ್ಲಲ್ಲಿ ಕಾಣುವ ಸಣ್ಣ ಸಣ್ಣ ದ್ವೀಪಗಳು, ಹಸಿರು ಹೊದ್ದು ನಿಂತ ಬೆಟ್ಟಗಳು ಮತ್ತು ಸರ‍್ಯಾಸ್ತದ ವೇಳೆ ಮೂಡುವ ವರ್ಣರಂಜಿತ ದೃಶ್ಯ ನೋಡುವುದೇ ಒಂದು ಸಂಭ್ರಮ.

ಕೃಷ್ಣಾ ನದಿಯ ಸೌಂರ‍್ಯ ನಿಜಕ್ಕೂ ಅದ್ಭುತ, ಇನ್ನೂ ಇಲ್ಲಿನ ಪ್ರಶಾಂತ ವಾತಾವತಣ ಮನಸ್ಸಿಗೆ ನೆಮ್ಮದಿ ನೀಡುತ್ತದೆ, ದಟ್ಟ ಕಾನನದ ನಡುವೆ ದೊಡ್ಡ ದೊಡ್ಡ ಬಂಡೆಗಲ್ಲುಗಳನ್ನು ಸೀಳಿಕೊಂಡು ಹಲವು ಟೀಸಿಲೊಡೆದು ಭೊರ್ಗರೆಯುತ್ತಿರುವ ಕೃಷ್ಣೆಯ ರುದ್ರನರ್ತನ ನೋಡಲು ಒಂದು ಕ್ಷಣ ಭಯ ಮೂಡಿಸಿದರು ಕೂಡ ನೈಸರ್ಗಿಕವಾದ ಸಣ್ಣ ಸಣ್ಣ ಜಲಪಾತ ಸೃಷ್ಟಿ ಮಾಡಿಕೊಂಡು ದುಮ್ಮಿಕ್ಕಿ ಹರಿಯುವ ಕೃಷ್ಣೆಯ ಬಿಂಕು ಬಿನ್ನಾಣ ನೋಡಲು ಪ್ರವಾಸಿಗರು ಛಾಯಾ ಭಗವತಿ ಕ್ಷೇತ್ರದತ್ತ ದೌಡಾಯಿಸುತ್ತಿದ್ದಾರೆ.

ಜಲಾಶಯದ ಗೇಟುಗಳ ಮೂಲಕ ನರ್ತನ ಮಾಡುತ್ತ ನದಿಗೆ ದುಮ್ಮಿಕ್ಕುವ ಕೃಷ್ಣೆಯ ನಯನ ಮನೋಹರ ದೃಶ್ಯ ನೋಡಬೇಕಾದರೆ ಛಾಯಾ ಭಗವತಿ ಕ್ಷೇತ್ರ ಅತ್ಯಂತ ಪ್ರಶಸ್ತವಾದ ಸ್ಥಳ. ಹೀಗಾಗಿ ಜಲಾಶಯದಿಂದ ನೀರು ಹರಿಸಿದಾಗ ಅಸಖ್ಯಾಂತ ಪ್ರವಾಸಿರು ಈ ಸ್ಥಳಕ್ಕೆ ಕುಟುಂಬ ಸಮೇತ ಬಂದು ಪ್ರಕೃತಿ ಸೌಂರ‍್ಯ ಸವಿಯುತ್ತಾರೆ. ಆದರೆ ಜಿಲ್ಲಾಡಳಿತ ಈ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಮೂಲಕ ಕೆಲ ಮೂಲಭೂತ ಸೌಲಭ್ಯಗಳನ್ನು ಒದಗಿಸುವತ್ತ ಗಮನ ಹರಿಸಿದರೆ ಈ ಕ್ಷೇತ್ರ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net