ಭಕ್ತರನ್ನು ಭಾವುರನ್ನಾಗಿಸುವ ದೇವಿ ಪುರಾಣ

02
Published on

ಕಕ್ಕೇರಾ : ನವರಾತ್ರಿ ನಿಮಿತ್ತ ಪಟ್ಟಣದಲ್ಲಿ ಭಾನುವಾರದಿಂದ ಆರಂಭವಾದ ದೇವಿ ಪುರಾಣ ಅದ್ದೂರಿ ಹಾಗೂ ಸಂಭ್ರಮದಿAದ ಜರುಗುತ್ತಿದ್ದು, ಪಟ್ಟಣದ ಸದರಗಟ್ಟಿ ಭಕ್ತರನ್ನು ಕೈ ಬೀಸಿ ಕರೆಯುತ್ತಿದೆ.

ಹಲವು ವರ್ಷದಿಂದ ನಡೆದುಕೊಂಡು ಬಂದ ದೇವಿ ಪುರಾಣ ಶ್ರೀ ನಂದಣ್ಣಪ್ಪ ಪೂಜಾರಿ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ಹಿರಿಯ ಮುತ್ಸದ್ಧಿ ಸೀತಾರಾಮ ನಾಯಕಗೌಡ ಜಹಾಗೀರದಾರ್ ಮುಖಂಡತ್ವದಲ್ಲಿ ಚಾಲನೆ ನೀಡಲಾಗಿದೆ. ದೇವಿ ಮಂದಿರದಲ್ಲಿ ಘಟಸ್ಥಾಪನೆ ಮಾಡಲಾಗಿದ್ದು, ಅರ್ಚಕ ಅಪ್ಪಣ್ಣ ಬಡಿಗೇರ ಪ್ರತಿನಿತ್ಯ ದೇವಿ ಮಂದಿರದಲ್ಲಿ ವಿಶೇಷ ಪೂಜಾ ಕೈಂಕರ್ಯ ಕೈಗೊಳ್ಳುತ್ತಿದ್ದಾರೆ.

ಪುರಾಣ ಪ್ರವಚನಕಾರ ವೇದಮೂರ್ತಿ ಬಸಯ್ಯ ಶಾಸ್ತಿç ದೇವಿಯ ಒಂಬತ್ತು ಅವತಾರವನ್ನು ಎಳೆ-ಎಳೆಯಾಗಿ ತಿಳಿಸುತ್ತಾ ಭಕ್ತವೃಂದವನ್ನು ಭಾವುಕರನ್ನಾಗಿಸುತ್ತಿದ್ದಾರೆ. ಯಡ್ರಾಮಿಯ ವಿನೋದಕುಮಾರ ಇಂಪಾದ ಜಾನಪದ, ತತ್ವಪದ ಹಾಡುಗಳನ್ನು ಹಾಡಿ ಭಕ್ತರನ್ನು ರಂಜಿಸುತ್ತಿದ್ದಾರೆ. ಮಲ್ಲಿಕಾರ್ಜುನ ಕರೆಕನಹಳ್ಳಿ ತಬಲಾ ಸಾಥ್ ನೀಡುತ್ತಿದ್ದಾರೆ.

ಪಟ್ಟಣದ ವಿಶಾಲವಾದ ಸ್ಥಳದಲ್ಲಿ ಸಂಜೆ ೭.೩೦ರಿಂದ ೯.೩೦ರವರೆಗೆ ನಡೆಯುವ ದೇವಿ ಪುರಾಣಕ್ಕೆ ಸುರಪುರ, ಗುರುಗುಂಟಾ, ಹಟ್ಟಿಚಿನ್ನದಗಣಿ, ಹುಣಸಗಿ, ಕೊಡೇಕಲ್, ನಾರಾಯಣಪುರ, ದೇವಾಪುರ ಅಲ್ಲದೆ ಸುತ್ತಮುತ್ತಲಿನ ಗ್ರಾಮಗಳ, ದೊಡ್ಡಿಗಳ ಜನರು ತಂಡೋಪತAಡವಾಗಿ ಟ್ರಾö್ಯಕ್ಟರ್, ಟಂಟA, ಬೈಕ್‌ಗಳಲ್ಲಿ ಆಗಮಿಸಿ ಶ್ರದ್ಧಾ-ಭಕ್ತಿಯಿಂದ ದೇವಿಯ ಮಹಿಮೆ ಆಲಿಸುತ್ತಿದ್ದಾರೆ. ಪ್ರತಿನಿತ್ಯ ಭಕ್ತರೊಬ್ಬರು ಮಹಾಪ್ರಸಾದ ಏರ್ಪಡಿಸುತ್ತಾರೆ. ಆಯೋಜಕರು ಅಚ್ಚುಕಟ್ಟಾಗಿ ಭಕ್ತರಿಗೆ ಪ್ರಸಾದವನ್ನು ಬಡಿಸುವ ಮೂಲಕ ದೇವಿ ಕೃಪೆಗೆ ಪಾತ್ರರಾಗುತ್ತಿದ್ದಾರೆ.

ದೇವಿ ಮಂದಿರದಲ್ಲಿ ಹಾಗೂ ಪುರಾಣ ಜರುಗುವ ಸದರಗಟ್ಟಿಯಲ್ಲಿ ವಿವಿಧ ಬಣ್ಣಬಣ್ಣದ ವಿದ್ಯುತ್ ಅಲಂಕಾರ ಮಾಡಲಾಗಿದ್ದು ಭಕ್ತರ ಕಣ್ಮನ ಸೆಳೆಯುತ್ತವೆ. ಎಲ್ಲೆಡೆ ಸ್ವಾಗತ ಕಮಾನುಗಳು ಸ್ವಾಗತಿಸುತ್ತಿವೆ. ಪುರಾಣ ಭಾನುವಾರ ಆರಂಭವಾಗಿದ್ದು, ಅ.೨೪ರಂದು ಕೊನೆಗೊಳ್ಳಲಿದೆ. ಹಣಮಂತರಾಯಗೌಡ ಜಹಾಗೀರದಾರ್, ಅಯ್ಯಣ್ಣ ಪೂಜಾರಿ, ಅಪ್ಪಣ್ಣ ಬಡಿಗೇರ, ಗುಂಡಪ್ಪ ಸೊಲಾಪುರ, ರಾಜು ಹವಾಲ್ದಾರ್, ದೇವಿಂದ್ರಪ್ಪ ಬಳಿಚಕ್ರ, ನಿಂಗಯ್ಯ ಬೂದಗುಂಪಿ, ರಮೇಶ ಶೆಟ್ಟಿ, ಸಿದ್ದಣ್ಣ ದೇಸಾಯಿ, ಪರಮಣ್ಣ ಕಮತಗಿ, ಪರಶುರಾಮ ಗೊವಿಂದರ್, ಈರಯ್ಯ ಸ್ವಾಮಿ, ಹಣಮಂತ್ರಾಯ ಗುರಿಕಾರ, ಸೋಮಶೇಖರ ದೊರೆ, ಚಂದ್ರು ವಜ್ಜಲ್, ಹಣಮಂತ್ರಾಯ ಬಳಿಚಕ್ರ, ಶಿವಪ್ಪ ಜಾಲಹಳ್ಳಿ, ರಾಘವೇಂದ್ರ ದೊರೆ ಈ ಕರ‍್ಯಕ್ರಮಕ್ಕೆ ಸಾಥ್ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net