ಭಕ್ತರ ದೇಣಿಗೆಯಿಂದ ರಾಮ ಮಂದಿರ ನಿರ್ಮಾಣ

6-1 ctpr 1
Published on

ಚಿತ್ತಾಪುರ: ಸರ್ಕಾರದ ಹಣ ಪಡೆಯದೆ ಭಕ್ತರ ದೇಣಿಗೆಯಿಂದ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂಬ ಜವಾಬ್ದಾರಿ ರಾಷ್ಟ್ರೀಯ ಸ್ವಯಂ ಸಂಘ, ವಿಶ್ವ ಹಿಂದು ಪರಿಷತ್ ವಹಿಸಿಕೊಂಡಿದೆ ಎಂದು ವಿಶ್ವ ಹಿಂದು ಪರಿಷತ್ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಹೇಳಿದರು.
ಪಟ್ಟಣದ ಬಜಾಜ್ ಕಾಂಪ್ಲೆಕ್ಸ್ನಲ್ಲಿ ವಿಶ್ವ ಹಿಂದು ಪರಿಷತ್ ಹಮ್ಮಿಕೊಂಡ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣೆ ಅಭಿಯಾನ ಕಚೇರಿ ಉದ್ಘಾಟಿಸಿದ ಅವರು, ತಾಲೂಕು, ಹಳ್ಳಿಗಳಿಗೆ ಕಾರ್ಯಕರ್ತರು ಸಂಪರ್ಕ ಮಾಡಲು ಸಭೆ ನಡೆಸಲು ಕಚೇರಿ ಅರಂಭ ಅಗತ್ಯವಾಗಿದೆ. ಈಗಾಗಲೇ ಪ್ರಾಂತ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಕಚೇರಿ ಆರಂಭಿಸಲಾಗಿದೆ ಎಂದರು.
ನಿಧಿ ಸಂಗ್ರಹಕ್ಕಾಗಿ 42 ಲಕ್ಷ ಜನರನ್ನು ಹಾಗೂ 12 ಕೋಟಿ ಮನೆಗಳ ಸಂಪರ್ಕ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಪರಿಷತ್ ವಿಭಾಗೀಯ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಅಂಬರೇಶ ಸುಲೇಗಾಂವ್, ಅಧ್ಯಕ್ಷ ಅಶ್ವಥ ರಾಠೋಡ್, ನಗರ ಪ್ರಾಧಿಕಾರ ಅಧ್ಯಕ್ಷ ದೀಪಕ ಹೊಸ್ಸೂರಕರ್, ಪ್ರಮುಖರಾದ ನಾಗರಡ್ಡಿ ಪಾಟೀಲ್ ಕರದಾಳ, ಬಸವರಾಜ ಬೆಣ್ಣೂರಕರ್, ರವೀಂದ್ರ ಸಜ್ಜನಶೆಟ್ಟಿ, ಮಲ್ಲಿಕಾಜರ್ುನ ಪೂಜಾರಿ, ಚಂದ್ರಶೇಖರ ಅವಂಟಿ, ನಾಗರಾಜ ಭಂಕಲಗಿ, ರಮೇಶ ಬೊಮ್ಮನಹಳ್ಳಿ, ಶ್ಯಾಮ ಮೇಧಾ, ಬಾಲಾಜಿ ಬುರುಬುರೆ, ಆನಂದ ಪಾಟೀಲ್ ನರಬೋಳಿ, ಕೋಟೇಶ್ವರ ರೇಷ್ಮಿ, ಮೇಘರಾಜ ಗುತ್ತೇದಾರ, ಸಾಬಣ್ಣ ಪೂಜಾರಿ, ರಾಜು ನವಲಿಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net