

ಬಸವಕಲ್ಯಾಣ: ನಗರದ ಮಲ್ಲಿಕಾರ್ಜುನ ಓಣಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಜಾತ್ರೆ ನಿಮಿತ್ತ ಸೋಮವಾರ ರಾತ್ರಿ ಭಕ್ತರ ಜೈಘೋಷಗಳ ಮಧ್ಯೆ ವೈಭವದ ರಥೋತ್ಸವ ಜರುಗಿತು. ಶ್ರೀ ಮಲ್ಲಿಕಾರ್ಜುನ ಮಹಾರಾಜ್‌ಕೀ ಜೈ. ಬಸವೇಶ್ವರ ಮಹಾರಾಜ್‌ಕೀ ಜೈಘೋಷ ಮೊಳಗಿದವು.
ಮಲ್ಲಿಕಾರ್ಜುನ ದೇವಸ್ಥಾನದಿಂದ ಕೋಟೆ ಮೂಲಕ ಮುಖ್ಯರಸ್ತೆ ಮಾರ್ಗವಾಗಿ ಶ್ರೀ ಬಸವೇಶ್ವರ ವೃತ್ತದವರೆಗೆ ಸಾಂಸ್ಕೃತಿಕ ವೈಭವದೊಂದಿಗೆ ನಡೆದ ಪಲ್ಲಕ್ಕಿ, ನಂದಿಧ್ವಜಗಳ ಮೆರವಣಿಗೆ ಶ್ರೀ ಬಸವೇಶ್ವರ ದೇವಸ್ಥಾನದ ಮಾರ್ಗವಾಗಿ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಮರಳಿದ ನಂತರ ರಥೋತ್ಸವ ಜರುಗಿತು.
ಸಂಜೆ ಪಲ್ಲಕ್ಕಿ ಹಾಗೂ ನಂದಿ ಧ್ವಜಗಳಿಗೆ ಶಾಸಕ ಶರಣು ಸಲಗರ ಹಾಗೂ ಸಾವಿತ್ರಿ ಸಲಗರ ಪೂಜೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಕೋಟೆ ಬಳಿ ನಂದಿ ಧ್ವಜಕ್ಕೆ ಪೂಜೆಯನ್ನು ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಹಾಗೂ ಕಾರ್ಯದರ್ಶಿ ಶ್ರೀಕಾಂತ ಬಡದಾಳೆ ಹಾಗೂ ಸಹ ಕಾರ್ಯದರ್ಶಿ ವಿವೇಕಾನಂದ ನೆರವೇರಿಸಿದರು. ತಡರಾತ್ರಿ ಬಿಡಿವಿಎಸ್ ಅಧ್ಯಕ್ಷ ಶಶಿಕಾಂತ ದುರ್ಗೆ ದಂಪತಿ ಪೂಜೆ ನೆರವೇರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವದ ನಂತರ ಮದ್ದು ಸುಡುವ ಕಾರ್ಯಕ್ರಮ ಜರುಗಿತು.
ಮೆರವಣಿಗೆ: ಅಲಂಕೃತದ ವಾಹನದಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ(ಶಿವನ) ಮೂರ್ತಿ ಹಾಗೂ ಪಲ್ಲಕ್ಕಿ, ನಂದಿ ಧ್ವಜಗಳ ಮೆರವಣಿಗೆಯಲ್ಲಿ ಡೊಳ್ಳು, ಮಹಿಳಾ ಕೋಲಾಟ, ಭಜನೆ ಸೇರಿ ಕಲಾ ತಂಡಗಳಿಂದ ನಡೆದ ಪ್ರದರ್ಶನ ಗಮನ ಸೆಳೆಯಿತು.
ಜಾತ್ರಾ ಸಮಿತಿ ಅಧ್ಯಕ್ಷ ನಾಗನಾಥ್ ಸಂಗುಳಗೆ, ಉಪಾಧ್ಯಕ್ಷ ಸೂರ್ಯಕಾಂತ ನಾಸೆ, ಕಾರ್ಯದರ್ಶಿ ಉಮೇಶ್ ಕೆವಟಿಗೆ, ಕೋಶಾಧ್ಯಕ್ಷ ದೀಪಕ ಅಗ್ರೆ, ಸಂತೋಷ ದುರ್ಗೆ, ಮಂಜು ಗುರವ, ವಿಜಯಕುಮಾರ ಹಾರ್ಕುಡೆ, ಸಿದ್ದು ಅಗ್ರೆ, ಶಿವಕುಮಾರ ಅಗ್ರೆ, ಸಚಿನ ಚಳುಮುಡಿ, ವೀರಭದ್ರ ಅಂದೇಲಿ, ಚಂದ್ರಕಾಂತ ದಮ್ಮನಸುರೆ, ಶಾಂತು ಚಪಾತೆ, ಸಂತೋಷ ಚಪಾತೆ, ಬಾಬುರಾವ್ ಚಪಾತೆ, ಮಲ್ಲಿಕಾರ್ಜುನ ಅಗ್ರೆ, ಸಿದ್ದು ನಾಸೆ, ಸೋಮನಾಥ ನಾಸೆ, ಸೋಮನಾಥ ಸಂಗುಳಗೆ, ಶ್ರೀಶೈಲ ವಾತಡೆ, ಶಿವಶಂಕರ ಮಂಠಾಳೆ, ಸಂಗಮೇಶ ಅವಸೆ, ಸೂರ್ಯಕಾಂತ ಕೆವಟಗಿ, ಗುರು ದುರ್ಗೆ, ಚನ್ನಪ್ಪ ರಾಜಾಪುರೆ, ಸಂಜು ಹಾರ್ಕುಡೆ, ವೀರೇಶ ಅಂಬುಲಗೆ, ಅಮರ ಕಿರುಣಗೆ ಹಾಗೂ ಭಕ್ತರು ಭಾಗವಹಿಸಿದ್ದರು.
ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿದರು. ಶಾಸಕ ಶರಣು ಸಲಗರ, ಗಂಡಣ್ಣ ಡಿಗ್ಗಿ ಅವರಿಂದ ಹಾಸ್ಯ ಕಾರ್ಯಕ್ರಮ ಜರುಗಿತು. ನಾಗಣ್ಣ ಸಂಗೋಲಗೆ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಡಾ.ಮಹೇಶ ಪಾಟೀಲ್ ಇತರರಿದ್ದರು. ಸೋಮವಾರ ಬೆಳಗ್ಗೆ ದೇವಸ್ಥಾನದಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆ ಜರುಗಿತು.