ಭಕ್ತರ ಆರಾಧ್ಯ ದೈವವಾಗಿದ್ದ ಬಸವಲಿಂಗ ಸ್ವಾಮಿಗಳು

25.ktal.02
Published on

ಕವಿತಾಳ: ಬಸವಲಿಂಗ ಸ್ವಾಮಿಗಳು ಭಕ್ತರ ಆರಾಧ್ಯ ದೈವವಾಗಿದ್ದರು ಎಂದು ಕಲ್ಮಠದ ಪೀಠಾಧಿಪತಿ ಅಭಿನವ ಸಿದ್ದಲಿಂಗ ಸ್ವಾಮಿಗಳು ಹೇಳಿದರು. ಪಟ್ಟಣದ ಕಲ್ಮಠದಲ್ಲಿ ಬಸವಲಿಂಗಸ್ವಾಮಿಗಳ ಏಳನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿ ಮಾತನಾಡಿದರು. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಆರಾಧ್ಯ ದೈವವಾಗಿದ್ದ ಬಸವಲಿಂಗ ಸ್ವಾಮಿಗಳು ಮಠವನ್ನು ಅಭಿವೃದ್ಧಿ ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಮುಂದುವರಿಯಲಾಗುವುದು ಎಂದರು. ಪ್ರಮುಖರಾದ ಮಾನಪ್ಪ ಪತ್ತಾರ, ದೇವರಾಜ ರೊಟ್ಟಿ, ಶೇಖರಪ್ಪ ಹಟ್ಟಿ, ಮಲ್ಲಿಕಾರ್ಜುನ ಕಡಬೂರ ವಟಗಲ್, ದೊಡ್ಡಪ್ಪ ಕಂದಗಲ್, ಬಸಯ್ಯ ಸ್ವಾಮಿ, ದೇವಪ್ಪ ನಾಗಲಿಕರ, ಪಂಪಾಪತಿ, ಬಸಣ್ಣ ಹೋಟೆಲ್. ರಾಜಶೇಖರ ನಾಡಗೌಡ, ಸಂಗಯ್ಯಸ್ವಾಮಿ, ಮಕ್ತಂವಲಿ, ಮುಸ್ತಫಾ ಒಂಟಿಬಂಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net