ಭಕ್ತ ಕನಕದಾಸರು ಮಹಾನ್ ಸಂತ

BJP
Published on

ಬೀದರ್: ನಗರ ಸೇರಿ ಜಿಲ್ಲಾದ್ಯಂತ ಭಕ್ತ ಶ್ರೇಷ್ಠ ಕನಕದಾಸರ 533ನೇ ಜಯಂತ್ಯುತ್ಸವ ಗುರುವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕರೊನಾ ಹಿನ್ನೆಲೆಯಲ್ಲಿ ಎಲ್ಲೆಡೆ ಸರಳ ಕಾರ್ಯಕ್ರಮ ಆಯೋಜಿಸಿ, ಕನಕದಾಸರ ತತ್ವ, ಚಿಂತನೆ, ಮೌಲ್ಯಗಳ ಕುರಿತು ಚಿಂತನ, ಮಥನ ನಡೆಸಲಾಯಿತು.

ವಿವಿಧ ಸಂಘ ಸಂಸ್ಥೆ, ಶಾಲಾ, ಕಾಲೇಜು ಹಾಗೂ ಕಚೇರಿಗಳಲ್ಲಿ ಜಯಂತಿ ನಡೆಯಿತು. ಕನಕದಾಸರು ಜಾತಿ ಪದ್ಧತಿ, ಮೇಲು-ಕೀಳು, ಅಸ್ಪ್ರಶ್ಯತೆಯಂತಹ ವ್ಯವಸ್ಥೆಗಳನ್ನು ವಿರೋಧಿಸಿ ಸಾಮಾಜಿಕ ನ್ಯಾಯ ಮತ್ತು ಪ್ರಗತಿಗೆ ಶ್ರಮಿಸಿದ ಮಹಾನ್ ಸಂತ. ಕನಕದಾಸರ ಮೌಲಿಕ ವಿಚಾರ ಎಂದಿಗೂ ಪ್ರಸ್ತುತ ಎಂದು ಹೇಳಿದರು.

ಬಿಜೆಪಿ: ಬಿಜೆಪಿ ನಗರ ಎಸ್ಟಿ ಮೋರ್ಚಾ ದಿಂದ ಇಲ್ಲಿನ ಜಿಲ್ಲಾ ಕಚೇರಿಯಲ್ಲಿ ಜಯಂತ್ಯುತ್ಸವ ಆಚರಿಸಲಾಯಿತು. ಮೋರ್ಚಾ ಜಿಲ್ಲಾ ಅಧ್ಯಕ್ಷ ಮಹೇಶ ಪಾಲಂ, ನಗರಾಧ್ಯಕ್ಷ ರಮೇಶ ಬಿರಾದಾರ, ಪ್ರಮುಖರಾದ ಈಶ್ವರಸಿಂಗ್ ಠಾಕೂರ್, ಹಣಮಂತ ಬುಳ್ಳಾ, ಪ್ರಕಾಶ ತಾಳಮಡಗಿ, ರಾಜು ಜಮಾದಾರ, ಪಂಡಿತ ಮುದಗೊಂಡ, ದೀಪಕ ಚಿದ್ರಿ, ಸುನೀಲ ಗೌಳಿ, ಅವಿನಾಶ ಬರೀದಾಬಾದೆ, ಬಸವರಾಜ ಜೋಜನಾ, ಕಿಶನ್ ಜಮಾದಾರ, ಗೋಪಾಲಕೃಷ್ಣ, ನಾಗೇಶ ಗಡ್ಡೆ, ಓಂಕಾರ ಕನ್ನಳ್ಳಿ ಇತರರಿದ್ದರು.

ಯುವ ಬಳಗ: ನೌಬಾದ್ ಬಸವೇಶ್ವರ ವೃತದಲ್ಲಿ ಯುವ ಬಳಗದಿಂದ ಕನಕದಾಸರ ಭಾವಚಿತ್ರಕೆ ಪುಷ್ಪಾಂಜಲಿ ಸಲ್ಲಿಸಿ ಜೈ ಘೋಷ ಕೂಗಲಾಯಿತು. ಶಿವರಾಜ ಮಳಗೆ, ದಯಾನಂದ ಸ್ವಾಮಿ, ಸೋಮನಾಥ ಭಂಗೂರೆ, ಸಂತೋಷ ಚೊಂಡೆ, ವಿಶಾಲ ಅತಿವಾಳೆ, ಮಲ್ಲು ಶೇಟ್, ಕೀರ್ತಿ ಭಂಗೂರೆ, ಸಂಗು ಹುಮನಾಬಾದ್, ಸಚಿನ್ ಪಾಟೀಲ್, ಬಲರಾಮ, ಸುನೀಲ, ವಿಜಯ, ಓಂಕಾರ ಇದ್ದರು.

ನವೀನ್ ಸ್ಕೂಲ್: ತಾಲೂಕಿನ ಚಿಟ್ಟಾ ಗ್ರಾಮದ ನವೀನ್ ಪಬ್ಲಿಕ್ ಶಾಲೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಶಾಲೆ ಅಧ್ಯಕ್ಷ ಕಾಮಶೆಟ್ಟಿ ಚಿಕ್ಕಬಸೆ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಬಸವರಾಜ ಸ್ವಾಮಿ, ಸಂಜೀವಕುಮಾರ ಸ್ವಾಮಿ, ಮನಹಾ ಮಠ, ಸ್ವಾತಿ ಕುಡ್ತೆ, ಅನೀತಾ, ಜಗದೀಶ, ಶಿವರಾಮ ರಾಠೋಡ್, ರಾಜಕುಮಾರ, ಸುನೀತಾ ರಾಮಶೆಟ್ಟಿ ಇದ್ದರು.

ಖಾಶೆಂಪುರ: ತಾಲೂಕಿನ ಖಾಶೆಂಪುರ (ಪಿ) ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್.ಡಿಎಂಸಿ ಉಪಾಧ್ಯಕ್ಷ ರವೀಂದ್ರ ಗುಮ್ಮಸ್ತಿ ಉದ್ಘಾಟಿಸಿದರು. ಮುಖ್ಯ ಗುರು ಗಂಗಾಧರ ಅಧ್ಯಕ್ಷತೆ ವಹಿಸಿದ್ದರು. ಶರಣಪ್ಪ ಅಣ್ಣಾಜಿ, ಉಮೇಶ ಬಾಲ್ಯಾಬಾಯಿ ಇತರರಿದ್ದರು.

ಕಮಠಾಣ: ತಾಲೂಕಿನ ಕಮಠಾಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ. ರೇಣುಕಾ ಜಾಧವ ಕನಕದಾಸರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಡಾ. ತ್ರಿವೇಣಿ, ಹಿರಿಯ ಆರೋಗ್ಯ ಸಹಾಯಕ ದೇವಿದಾಸ ಇತರರಿದ್ದರು.

ಆನ್ ಲೈನ್ ನಲ್ಲಿ ವೀಕ್ಷಣೆಗೆ ಅವಕಾಶ
ಬೀದರ್ ತಾಲೂಕಿನ ಘೋಡಂಪಳ್ಳಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಕನಕದಾಸ ಜಯಂತ್ಯುತ್ಸವ ಜರುಗಿತು. ಕರೊನಾ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಫೇಸ್ ಬುಕ್, ಝೂಮ್ ಆ್ಯಪ್ ನಿಂದ ಜನರು ಹಾಗೂ ವಸತಿ ಶಾಲೆ ವಿದ್ಯಾರ್ಥಿಗಳು ನೇರವಾಗಿ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು. ವಸತಿ ಶಾಲೆ ಜಿಲ್ಲಾ ಸಮನ್ವಾಯಾಧಿಕರಿ ಶರಣಪ್ಪ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ತಿಮ್ಮಪ್ಪನಾಯಕ, ರವೀಂದ್ರ ಚಟನ್ನಳ್ಳಿ, ವಿಜಯಕುಮಾರ ಮಲ್ಲಿಗೆ, ಸವಿತಾ, ಶ್ರೀಲತಾ ಮೇತ್ರೆ, ರಾಜರೆಡ್ಡಿ ಅನೀಲ, ಗುರುನಾಥ ಮೇತ್ರೆ, ಸೋಮಶೇಖರ ಬಿರಾದಾರ, ಬಸವರಾಜ ಉದಗೀರೆ, ಸುಧಾ ಬಿ., ಸಂಗೀತಾ ಹಸನಾಬಾದೆ ಇದ್ದರು. ಮಚೇಂದ್ರನಾಥ ಕಾಂಬ್ಳೆ ಸ್ವಾಗತಿಸಿದರು. ದೇವಿದಾಸ ಜೋಶಿ ನಿರೂಪಣೆ ಮಾಡಿದರು. ಶಿವಕುಮಾರ ಪಾಂಚಾಳ ಕನಕದಾಸರ ಕೀರ್ತನೆ ಹಾಡಿದರು. ಈ ವೇಳೆ ವಿವೇಕ ವಾಲಿ ಫೌಂಡೇಷನ್ ನಿಂದ ಮಾಸ್ಕ್ ವಿತರಿಸಲಾಯಿತು.

ಜಾತಿ, ಧರ್ಮ ಮೀರಿದ ಚಿಂತನೆ
ಕನಕದಾಸರ ವಿಚಾರಗಳು ಜಾತಿ, ಧರ್ಮಗಳು ಮೀರಿದ್ದಾಗಿವೆ. ಇವುಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಜಯಪುರದ ಸಂಶೋಧಕ, ದಾಸ ಸಾಹಿತ್ಯ ವಿದ್ವಾಂಸ ಡಾ.ಕೃಷ್ಣ ಕೋಲ್ಹಾರ್ ಕುಲಕರ್ಣಿ ಅಭಿಪ್ರಾಯಪಟ್ಟರು. ಕನಕ ಜಯಂತಿ ನಿಮಿತ್ತ ದಾಸ ಸಾಹಿತ್ಯ ಪರಿಷತ್ತಿನಿಂದ ಆನ್ ಲೈನ್ ಮೂಲಕ ಆಯೋಜಿಸಿದ್ದ `ಕನಕ ಓದು' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸದ್ಯ ಎಲ್ಲೆಡೆ ನಡೆಯುತ್ತಿರುವ ಅತ್ಯಾಚಾರ, ಅನಾಚಾರಗಳ ಕುರಿತು ಕೀರ್ತನೆಗಳಲ್ಲಿ ಅಂದೇ ಪ್ರಸ್ತಾಪಿಸಿರುವ ಕನಕದಾಸರು ಮಹಾನ್ ಕಾಲ ಜ್ಞಾನಿಯಾಗಿದ್ದರು. ಅತ್ಯಂತ ಸರಳವಾಗಿ ಹಾಡಿರುವ ಅವರ ಕೀರ್ತನೆಗಳು ಓದಿ ತಿಳಿದುಕೊಳ್ಳಬೇಕು ಎಂದರು. ಕನಕದಾಸರು ನಾಡು ಕಂಡ ಶ್ರೇಷ್ಠ ಸಂತ. ಅವರನ್ನು ಒಂದು ಜಾತಿಗೆ ಸಿಮೀತಗೊಳಿಸದೆ ಮನುಕುಲದ ಬೆಳಕಾಗಿ ಸ್ವೀಕರಿಸಬೇಕು ಎಂದು ಹೇಳಿದರು. ದಾಸ ಸಾಹಿತ್ಯ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಬಿ.ಎಂ. ಅಮರವಾಡಿ ಇತರರು ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net