ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಿ

FotoJet (4)
Published on

ಶಾಸಕ ಡಾ.ಎಚ್​.ಡಿ.ರಂಗನಾಥ್​ ಹೇಳಿಕೆ

ಕುಣಿಗಲ್​: ದೇಶವನ್ನು ಬ್ರಿಟಿಷರ ಗುಲಾಮ ಗಿರಿಯಿಂದ ವಿಮುಕ್ತಿಗೊಳಿಸಲು ತಮ್ಮ ಪ್ರಾಣ ತ್ಯಾಗ ಮಾಡಿದ ಮಹಾನ್​ ವ್ಯಕ್ತಿಗಳನ್ನು ನೆನಪು ಮಾಡಿಕೊಂಡರೇ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಶಾಸಕ ಡಾ.ಎಚ್​.ಡಿ.ರಂಗನಾಥ್​ ತಿಳಿಸಿದರು.

ಪಟ್ಟಣದ ಜಿಕೆಬಿಎಂಎಸ್​ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ$್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರಕ್ಕಾಗಿ ಸಾವಿರಾರು ಮಂದಿ ತಮ್ಮ ಪ್ರಾಣದ ಅಂಗನ್ನು ತೊರೆದು ಹಗಲು ರಾತ್ರಿ ಹೋರಾಟ ನಡೆಸಿ, ತಮ್ಮ ಪ್ರಾಣವನ್ನು ಬಲಿದಾನ ಮಾಡಿ ಕೊಟ್ಟಿದ್ದಾರೆ, ಇಂತಹ ಮಹನೀಯರನ್ನು ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.

ತಹಸೀಲ್ದಾರ್​ ಯು.ರಶ್ಮಿ ದ್ವಜಾರೋಹಣ ನೆರವೇರಿಸಿದರು. ಪೊಲೀಸ್​, ಗೃಹ ರಕ್ಷಕ ದಳ, ಪಥ ಸಂಚಲನ ನಡೆಯಿತು. ವಿವಿಧ ಶಾಲಾ ಮಕ್ಕಳಿಂದ ಸಾಂಸತಿಕ ಕಾರ್ಯಕ್ರಮಗಳು ಆಯೊಜಿಸಲಾಗಿತ್ತು.

ಮಾಜಿ ಸೈನಿಕರಾದ ಟಿ.ಎನ್​.ಧನಂಜಯ್ಯ, ಸಿ.ಧನಂಜಯ್ಯ, ಹಿರಿಯ ಪತ್ರಕರ್ತ ಎ.ಎಂ.ಷರೀಪ್​ಉಲ್ಲಾ, ಪಿಡಿಒ ಚಂದ್ರಹಾಸ್​, ಪ್ರಾಚಾರ್ಯ ನಾಗರಾಜು, ಅಂಗನವಾಡಿ ಕಾರ್ಯಕರ್ತೆ ಭಾಗ್ಯಮ್ಮ, ಜಯಮ್ಮ, ಪೊಲೀಸ ಸಿಬ್ಬಂದಿ ಎನ್​.ಜಿ.ರವಿ, ರವಿಕುಮಾರ್​, ಪುರುಷೋತ್ತಮ್​, ದಿನೇಶ್​, ದಿವ್ಯಶ್ರೀ, ಚೇತನ್​ಕುಮಾರ್​, ಚಂದ್ರಕುಮಾರ್​, ನಾಗರಾಜು, ನಾರಾಯಣಪ್ಪ ಸೇರಿ 21 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.

ೇತ್ರ ಶಿಕ್ಷಣಾಧಿಕಾರಿ ಬೋರೇಗೌಡ, ಪುರಸಭೆ ಮುಖ್ಯಾಧಿಕಾರಿ ಕೃಷ್ಣ, ಕಸಾಪ ಅಧ್ಯಕ್ಷ ಕಪನಿಪಾಳ್ಯರಮೇಶ್​, ತಾಲೂಕು ಸರ್ಕಾರಿ ನೌಕರರ ಸಂದ ಅಧ್ಯಕ್ಷ ಸಿ.ಸಿ.ಶಿವಣ್ಣ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಆರ್​.ರಂಗನಾಥ್​, ಆರ್​ಎಫ್​ಒ ಜಗದೀಶ್​, ಕಾಂಗ್ರೆಸ್​ ಮುಖಂಡರಾದ ರೆಹಮಾನ್​ಷರೀಫ್​, ಮಾಗಡಯ್ಯ, ಸುಮತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net