ಬ್ರಾಹ್ಮಣ ಸಂಘ-ಸಂಸ್ಥೆಗಳ ಪದಾಧಿಕಾರಿಗಳಿಂದ ಪ್ರಚಾರ

21
Published on

ಮೈಸೂರು: ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ.ಎಸ್. ಶ್ರೀವತ್ಸ ಅವರ ಪರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಬಿ.ಆರ್. ನಟರಾಜ ಜೋಯಿಸ್ ನೇತೃತ್ವದಲ್ಲಿ ಕ್ಷೇತ್ರದ ವಿವಿಧೆಡೆ ಮತಯಾಚನೆ ಮಾಡಲಾಯಿತು.
ವಿವೇಕಾನಂದನಗರ ವೃತ್ತದ ಗಣಪತಿ ದೇವಸ್ಥಾನದ ಬಳಿ ಮೈಸೂರಿನ ಬ್ರಾಹ್ಮಣ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪ್ರಚಾರ ಆರಂಭಿಸಿದರು. ಬಳಿಕ ವಿವೇಕಾನಂದನಗರ, ಶ್ರೀರಾಂಪುರ ಅರವಿಂದನಗರ, ಕುವೆಂಪುನಗರ ಮತ್ತು ಸುತ್ತಮುತ್ತಲಿನ ಮನೆಗಳಿಗೆ ಭೇಟಿ ನೀಡಿ ಶ್ರೀವತ್ಸ ಪರ ಮತಯಾಚಿಸಿದರು.
ಮೈಸೂರು ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷರೂ ಆದ ಬಿ.ಆರ್. ನಟರಾಜ ಜೋಯಿಸ್ ಮಾತನಾಡಿ, ಕೃಷ್ಣರಾಜ ಕ್ಷೇತ್ರದಲ್ಲಿ ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಬಾರಿ ವಿಪ್ರರ ಮತದಾನದ ಸಂಖ್ಯೆ ಹೆಚ್ಚಳವಾಗುವಲ್ಲಿ ವಿಪ್ರ ಸಂಘ-ಸಂಸ್ಥೆಗಳ ಮುಖಂಡರು ವಿಶೇಷ ಕಾಳಜಿ ವಹಿಸಬೇಕಿದೆ ಎಂದು ಕೋರಿದರು.
ಸರ್ಕಾರಕ್ಕೆ ತೆರಿಗೆ ಕಟ್ಟುವಲ್ಲಿ ವಿಪ್ರ ಸಮುದಾಯದವರು ಪ್ರಾಮಾಣಿಕವಾಗಿ ಎಲ್ಲರಿಗಿಂತ ಮುಂಚಿತವಾಗಿ ಸರದಿ ಸಾಲಿನಲ್ಲಿ ನಿಂತು ಪಾವತಿ ಮಾಡುತ್ತಾರೆ. ಅದೇ ರೀತಿಯಲ್ಲಿ ಪ್ರಜಾಪ್ರಭುತ್ವದಲ್ಲಿ ಮತದಾನವೂ ನಮ್ಮೆಲ್ಲರ ಹಕ್ಕು. ಮುಂದಿನ ದಿನದಲ್ಲಿ ಸರ್ಕಾರದ ಸವಲತ್ತು ಪಡೆಯುವಲ್ಲಿ ಸಮುದಾಯವರು ಕಡ್ಡಾಯವಾಗಿ ಮತಾದನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಮೈಸೂರಿನ ಬ್ರಾಹ್ಮಣ ಸಂಘ-ಸಂಸ್ಥೆಗಳಾದ ಬ್ರಾಹ್ಮಣ ಧರ್ಮ ಸಹಾಯ ಸಭಾ, ಕಲ್ಯಾಣ ಭವನ, ಬೊಬ್ಬರಕಮ್ಮೆ ಬ್ರಾಹ್ಮಣ ಸಂಘ, ವಿವೇಕಾನಂದನಗರ ಬ್ರಾಹ್ಮಣ ಸಂಘ, ಮುಲಕನಾಡು ಬ್ರಾಹ್ಮಣ ಸಂಘ, ಕೌಶಿಕ ಸಂಕೇತಿ ಸಂಘ, ಬೆಟ್ಟದಪುರ ಸಂಕೇತಿ ಸಂಘ, ಸಂಧ್ಯಾ ಸುರಕ್ಷ ಟ್ರಸ್ಟ್, ಕರ್ನಾಟಕ ಬ್ರಾಹ್ಮಣ ಹಿರಿಯ ನಾಗರಿಕ ವೇದಿಕೆ, ಅಟಲ್ ಜಿ ಸಂಸ್ಕಾರ ಪ್ರತಿಷ್ಠಾನ ಸೇರಿದಂತೆ ಹಲವು ಸಂಸ್ಥೆಗಳ ಮುಖಂಡರು ಪ್ರಚಾರದಲ್ಲಿ ಭಾಗವಹಿಸಿದ್ದರು.
ಮೇಲುಕೋಟೆ ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮಿ, ಬ್ರಾಹ್ಮಣ ಧರ್ಮ ಸಹಾಯ ಸಭಾ ಅಧ್ಯಕ್ಷ ಎಲ್.ಶ್ರೀನಿವಾಸ್, ಹಿರಿಯ ವಕೀಲ ರವೀಂದ್ರ, ಬೊಬ್ಬರಕಮ್ಮೆ ಬ್ರಾಹ್ಮಣ ಸಂಘದ ಅಧ್ಯಕ್ಷ ಸೂರ್ಯನಾರಾಯಣ್, ಬಿಇಎಂಎಲ್ ಬ್ರಾಹ್ಮಣ ಸಂಘದ ಅಧ್ಯಕ್ಷ ಗಣೇಶ್ ಕುರ್ಕಿ, ಬ್ರಾಹ್ಮಣ ಮುಖಂಡರಾದ ಕೆ.ರಘುರಾಂ ವಾಜಪೇಯಿ, ಆರ್. ಸತ್ಯನಾರಾಯಣ, ಲಕ್ಷ್ಮೀ ದೇವಿ, ವಿಜಯಲಕ್ಷ್ಮೀ, ಸುರೇಶ್, ವಿಶ್ವನಾಥ್, ವಿನಯ್, ಅನಂತಪ್ರಸಾದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net