ಬ್ರಹ್ಮಾವರ: ನಾಯಿಯ ಬೆನ್ನಟ್ಟಿ ಮನೆಯೊಳಗೆ ಬಂಧಿಯಾದ ಚಿರತೆ !

Published on

ಉಡುಪಿ: ಬ್ರಹ್ಮಾವರ, ನೈಲಾಡಿ ಸಮೀಪ ಆಹಾರ ಹುಡುಕಿ ಬಂದಿದ್ದ ಚಿರತೆಯೊಂದು ಮನೆಯ ಕೋಣೆಯೊಳಗೆ ಬಂಧಿಯಾಗಿದ್ದು, ಅರಣ್ಯ ಇಲಾಖೆ ರಕ್ಷಣೆ ಕಾರ್ಯಚರಣೆ ನಡೆಸಿ ಚಿರತೆಯನ್ನು ರಕ್ಷಿಸಿ ಕಾಡಿಗೆ ಬಿಟ್ಟ ಘಟನೆ ನಡೆದಿದೆ.

ಭಾನುವಾರ ಬೆಳಗ್ಗೆ ಆಹಾರ ಹುಡುಕತ್ತಾ ಬಂದಿದ್ದ ಚಿರತೆ ಸಾಕು ನಾಯಿ ಬೇಟೆಗೆ ಮುಂದಾಗಿದೆ. ಈ ವೇಳೆ ಹೆದರಿದ ನಾಯಿ ಮನೆಯ ಕೋಣೆಯೊಳಗೆ ನುಗ್ಗಿದೆ‌. ನಾಯಿಯನ್ನು ಬೆನ್ನಟ್ಟಿ ಚಿರತೆ ಕೊಠಡಿಗೆ ಹೋಗಿದೆ.

ಕೋಣೆಯೊಳಗಿನ ಸದ್ದು ಕೇಳಿದ ಮನೆಯವರು ಎಚ್ಚರಗೊಂಡು ಉಪಾಯದಿಂದ ಕೋಣೆ ಬಾಗಿಲು ಹಾಕಿದ್ದಾರೆ.

ಅರಣ್ಯ ಇಲಾಖೆ ಸಾರ್ವಜನಿಕರ ಸಹಕಾರದೊಂದಿಗೆ ಬೋನನ್ನು ಇಟ್ಟು ಒಂದುವರೆ ಗಂಟೆಗಳ ಕಾಲ ನಿರಂತರ ಕಾರ್ಯಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿದರು. ನಂತರ ಸಾಯ್ಬರಕಟ್ಟೆ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಚಿರತೆಯನ್ನು ಮೀಸಲು ಅರಣ್ಯದಲ್ಲಿ ಸುರಕ್ಷಿತವಾಗಿ ಬಿಡಲಾಯಿತು.

ಸ್ಥಳಕ್ಕೆ ಶಂಕರನಾರಾಯಣ ವಲಯದ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ನಾಯ್ಕ್, ಸಿಬ್ಬಂದಿ ರವಿ, ರವೀಂದ್ರ, ಸಂತೋಷ್ ಜೋಗಿ, ವಿಠಲ್ ನಾಯ್ಕ್, ಲಕ್ಷ್ಮಣ, ಶಿವು, ಸುದೀಪ್ ಶೆಟ್ಟಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net