ಬ್ರಹ್ಮಾಂಡದ ಸೃಷ್ಟಿಕರ್ತ ವಿಶ್ವಕರ್ಮ

17 BIRUR 02 væŸ
Published on

ಬೀರೂರು: ಬ್ರಹ್ಮಾಂಡದ ಸೃಷ್ಟಿಕರ್ತರಾದ ದೇವನು ದೇವತೆಗಳಿಗೆ ಅಧಿಕಾರ ನೀಡಿದ ಮಹಾನ್ ಶಕ್ತಿ ಭಗವಾನ್ ವಿಶ್ವಕರ್ಮರು ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್.ಮೋಹನ್​ಕುಮಾರ್ ಹೇಳಿದರು.

ಪುರಸಭೆ ಸಭಾಂಗಣದಲ್ಲಿ ಶನಿವಾರ ವಿಶ್ವಕರ್ಮ ಜಯಂತಿ ಅಂಗವಾಗಿ ವಿಶ್ವಕರ್ಮ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲೂ ಒಂದೊಂದು ರೀತಿಯ ಚಿಂತನೆಗಳಿರುವುದು ಸಹಜ. ಆದರೆ ವಿಶ್ವಕರ್ಮ ಸಮಾಜದ ಬಂಧುಗಳಲ್ಲಿಯೇ ವಿಶೇಷ ರೀತಿಯ ಚಿಂತನೆಗಳು ರಕ್ತಗತವಾಗಿ ಮೂಡುತ್ತವೆ. ಸರ್ಕಾರ ವಿಶ್ವಕರ್ಮ ಜಯಂತಿಗೆ ರಜಾ ಘೊಷಣೆ ಮಾಡುವ ಬದಲು ನಿಗದಿತ ಸಮಯಕ್ಕಿಂತ ಒಂದು ತಾಸು ಹೆಚ್ಚಿನ ಕೆಲಸ ನಿರ್ವಹಿಸಿ ಜಯಂತಿ ಮಹತ್ವ ಪ್ರದರ್ಶಿಸಬೇಕು ಎಂದರು.

ಪುರಸಭೆ ಅಧ್ಯಕ್ಷ ಎಂ.ಪಿ.ಸುದರ್ಶನ್ ಮಾತನಾಡಿ, ಭಗವಾನ್ ವಿಶ್ವಕರ್ಮ ಒಂದೇ ಸಮಾಜಕ್ಕೆ ಸೀಮಿತರಾದವರಲ್ಲ. ಎಲ್ಲ ಸಮುದಾಯಕ್ಕೆ ಮಾರ್ಗದರ್ಶಕರಾಗಿದ್ದಾರೆ. ಈ ಜಯಂತಿಯನ್ನು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಚಾಲನೆ ನೀಡಿದ್ದರು. ಈಗ ವಿಶ್ವಕರ್ಮ ಜಯಂತಿಗೆ ಸರ್ಕಾರ ರಜಾ ಘೊಷಣೆ ಮಾಡಿರುವುದು ಶ್ಲಾಘನೀಯ ಎಂದರು.

ಸದಸ್ಯ ಮಲ್ಲಿಕಾರ್ಜುನ್ ಮಾತನಾಡಿ, ತತ್ವದ ಆಧಾರದ ಮೇಲೆ ರೂಪ ನೀಡಿ ಕಟ್ಟಡ, ಆಭರಣ, ಶಿಲ್ಪಕಲೆ ಹೀಗೆ ತಮ್ಮ ನೈಪುಣ್ಯತೆಯನ್ನು ದೃಢೀಕರಿಸಿದವರು ಭಗವಾನ್ ವಿಶ್ವಕರ್ಮರು. ಅವರ ಸಮಾಜದಲ್ಲಿ ಜನ್ಮ ತಾಳಿರುವ ನಾವೇ ಧನ್ಯರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net