ಬ್ರಹ್ಮಶ್ರೀ ತತ್ವಾದರ್ಶಗಳು ದಾರಿ ದೀಪ

CTD BRAMMASRI NARAYANAGURUGALU....
Published on

ಚಿತ್ರದುರ್ಗ: ಹಿಂದುಳಿದ ಸಾಮಾನ್ಯ ಕುಟುಂಬದ ನಾರಾಯಣ ಗುರುಗಳು,ಸಾಮಾನ್ಯದಿಂದ ಅಸಾಮಾನ್ಯ ಸ್ಥಾನಕ್ಕೆ ಏರುವ ಮೂಲಕ ಬ್ರಹ್ಮಶ್ರೀ ಪ ದವಿಗೆ ಭಾಜನರಾಗಿದ್ದರೆಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ಹೇಳಿದರು. ಜಿಲ್ಲಾಡಳಿತ,ಜಿಪಂ,ನಗರಸಭೆ ಸಹಯೋಗ ದೊಂದಿಗೆ ಡಿಸಿ ಕ ಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆಯಲ್ಲಿ ನಾರಾಯಣ ಗುರು ಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ನಾರಾಯಣ ಗುರುಗಳು ಅಂದಿನ ದಿನಮಾನಗಳಲ್ಲಿದ್ದ ಶೋಷಣೆ,ಧಾರ್ಮಿಕ ಅಸಹಿಷ್ಣುತೆ,ಅಸ್ಪಶ್ಯತೆ ಪಿಡುಗು ಹೋಗಲಾಡಿಸಲು ಶ್ರ ಮಿಸಿದ್ದರು. ಸಾಮಾನ್ಯ ಜನರಿಗೆ ದೇವಾಲಯದ ಒಳಗಡೆ ಪ್ರವೇಶ ನಿರಾಕರಣೆ ಸಂದರ್ಭದಲ್ಲಿ ನಾರಾಯಣ ಗುರುಗಳು ಪರ್ಯಾಯ ದೇವಾಲಯಗಳನ್ನು ಸ್ಥಾಪಿಸಿದ್ದರು. ಅವರ ತತ್ವಾದರ್ಶಗಳು ಬದುಕಿಗೆ ದಾರಿದೀಪವಾಗಿವೆ ಎಂದರು.
ಆರ್ಯ ಈಡಿಗ ಸಮಾಜದಿಂದ ವಸತಿ ನಿಲಯ ನಿರ್ಮಾಣ ಮಾಡಿ,ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರದ ಸೌಲಭ್ಯ ಗಳನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಸಮಾಜ ಮುಖ್ಯವಾಹಿನಿಗೆ ಬರಬೇಕಿದೆ ಎಂದರು.
ಆರ್ಯ ಈಡಿಗ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಜೀವನ್,ನಗರಸಭೆ ಸದಸ್ಯೆ ಅನುರಾಧ ರವಿಕುಮಾರ್,ಕೆಎಸ್‌ಎಫ್‌ಸಿ ಚಿತ್ರದುರ್ಗ ಶಾಖೆ ಉಪ ವ್ಯವಸ್ಥಾಪಕ ಸತ್ಯನಾರಾಯಣ,ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಕುಮಾರ ಸ್ವಾಮಿ, ನಾಗೇಂದ್ರಪ್ರಸಾದ್,ಜಗದೀಶ,ಟಿ.ಸ್ವಾಮಿ,ಲಕ್ಷ್ಮೀಕಾಂತ್,ಕೆಪಿಎಂ ಗಣೇಶಯ್ಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net