

ಅಂಕಲಗಿ: ಗೋಕಾಕ ತಾಲೂಕಿನ ಅಂಕಲಗಿ ಸಮೀಪದ ಮಲಾಮರಡಿ ಗ್ರಾಮದ ಹತ್ತಿರದಲ್ಲಿರುವ ಶತಮಾನಗಳಷ್ಟು ವರ್ಷ ಹಳೆಯದಾದ ಶ್ರೀ ಬ್ರಹ್ಮದೇವರ ದೇವಸ್ಥಾನ ಯಾವುದೇ ಮೂಲ ಸೌಕರ್ಯಗಳಿಲ್ಲದೆ ಬಡವಾಗಿದೆ.
ಕೊಡುಗೈ ದಾನಿಗಳ ಸಹಾಯ ಮತ್ತು ಸರ್ಕಾರದ ನೆರವಿಲ್ಲದೆ ಈ ಮಂದಿರ ಅನಾಥವಾಗಿದ್ದು, ದೇವಸ್ಥಾನಕ್ಕೆ ತೆರಳಲು ಸರಿಯಾದ ರಸ್ತೆ, ವಿದ್ಯುತ್ ದೀಪಗಳು, ಶೌಚಗೃಹಗಳು, ಕುಡಿಯುವ ನೀರು ಮತ್ತು ಯಾತ್ರಿಗಳಿಗೆ ತಂಗಲು ವಿಶ್ರಾಂತಿ ಗೃಹಗಳ ಅವಶ್ಯವಿದ್ದು, ಸಂಬಂಧಿತ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.
10 ಗುಂಟೆಗೂ ಹೆಚ್ಚು ಪ್ರದೇಶದಲ್ಲಿ ಆವರಿಸಿದ ದೇವಸ್ಥಾನದಲ್ಲಿ ನಿತ್ಯ ಪೂಜೆ ನೆರವೇರಿಸಲು ಪೂಜಾರಿಗಳಿಲ್ಲದ್ದರಿಂದ ಮಂದಿರದ ಅಧ್ಯಕ್ಷ ಬಸನಗೌಡ ಗುತ್ತಿ ಅವರೇ ನಿತ್ಯ ಪೂಜೆ, ಪುನಸ್ಕಾರ ನೆರವೇರಿಸುತ್ತಾರೆ. ಮಂದಿರದ ಒಳಾಂಗಣದಲ್ಲಿ ಸುಂದರ ಹೂದೋಟ ಕೂಡ ನಿರ್ಮಿಸಿದ್ದಾರೆ.ಇಲಾಖೆ ಮತ್ತು ಸರ್ಕಾರ ಗಂಭೀರವಾಗಿ ಪರಿಗಣಿಸಿ ದೇವಸ್ಥಾನಕ್ಕೆ ಸಕಲ ಸೌಲಭ್ಯ ಕಲ್ಪಿಸಬೇಕು ಎಂದು ಸದ್ಭಕರು ಆಗ್ರಹಿಸಿದ್ದಾರೆ.