

ನಾಪೋಕ್ಲು: ಸಮೀಪದ ಕಡಿಯತ್ತ ನಾಡು ಕೊಣಂಜಗೇರಿ ಗ್ರಾಮದ ಶ್ರೀ ಭದ್ರಕಾಳಿ ದೇವಾಲಯದ ಮರುಪ್ರತಿಷ್ಠಾಪನೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಡಿ.25ರಿಂದ 30 ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು, ದೇವಾಲಯದಲ್ಲಿ ಸಕಲ ಸಿದ್ಧತೆ ನಡೆಸಲಾಗಿದೆ. 30ರಂದು ಬೆಳಗ್ಗೆ 10.16ಕ್ಕೆ ಮೀನಾ ಲಗ್ನ ಮುಹೂರ್ತದಲ್ಲಿ ಭದ್ರಕಾಳಿ ಚಾಮುಂಡೇಶ್ವರಿ ಹಾಗೂ ಉಪದೇವತೆಗಳ ಪ್ರತಿಷ್ಠ ಅಷ್ಟಬಂಧ ಬ್ರಹ್ಮಕಲಕೋತ್ಸವ ತಂತ್ರಿ ಎ.ಜಿ ಪಂಡರೀಶ ಅರಳತ್ತಾಯ ನೇತೃತ್ವದಲ್ಲಿ ನಡೆಯಲಿದೆ. 25ರಂದು ಸಂಜೆ 5 ಗಂಟೆಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಧ್ವಜಾರೋಹಣ, ವಾಸ್ತು ಹೋಮ, ರಕ್ಷೋಘ್ನ ಹೋಮ, ವಾಸ್ತು ಬಲಿ ನೆರವೇರಲಿದೆ. 26ರಂದು ಗಣಹೋಮ, ಬಿಂಬಶುದ್ಧಿ, ಕಲಶ ಮೃತ್ಯುಂಜಯ ಹೋಮ ನಡೆಯಲಿದೆ. ಅಂದು ಸಂಜೆ ಅಧಿವಾಸ ಹೋಮ ನಡೆಯಲಿದೆ. 27ರಂದು ನಾಗ ಪ್ರತಿಷ್ಠೆ, ಆಶ್ಲೇಷ ಹೋಮ, ಆಶ್ಲೇಷ ಬಲಿ ನಡೆಯಲಿವೆ. 28ರಂದು ಚಂಡಿಕಾ ಹೋಮ ನಡೆಯಲಿದೆ. ಸಂಜೆ ಚಾಮುಂಡಿ ಸ್ಥಾನದಲ್ಲಿ ವಾಸ್ತು ಹೋಮ, ವಾಸ್ತು ಬಲಿ ನೆರವೇರಲಿದೆ. 29ರಂದು ಗಣಪತಿ ಹೋಮ, ಚಾಮುಂಡಿ ಪ್ರತಿಷ್ಠಾ ಹೋಮ, ಚಾಮುಂಡಿ ಬಿಂಬ ಪ್ರತಿಷ್ಠೆ ನಡೆಯಲಿದೆ. ಸಂಜೆ ಕಲಶ ಮಂಡಲ ರಚನೆ, ಕಳಶ ಪ್ರತಿಷ್ಠೆ ಹಾಗೂ ಶಿಖರ ಪೂಜೆ ನಡೆಯಲಿದೆ. 30ರಂದು ಬೆಳಿಗ್ಗೆ 10 ಗಂಟೆಗೆ ಮೀನ ಲಗ್ನದಲ್ಲಿ ಬಿಂಬ ಪ್ರತಿಷ್ಠೆ, ಗಣಹೋಮ, ಪ್ರತಿಷ್ಠಾ ಹೋಮ, ಶಿಖರ ಪ್ರತಿಷ್ಠೆ, ಮಹಾಪೂಜೆಗಳು ನೆರವೇರಲಿವೆ.