

ಹಾಸನ: ಸಮಾಜದಲ್ಲಿ ತಾರತಮ್ಯ ತೊಡೆದು ಹಾಕಲು ಹೋರಾಟ ಮಾಡುವ ಮೂಲಕ ಪ್ರತಿಯೊಬ್ಬರನ್ನು ಸಮಾನತೆಯಿಂದ ಕಾಣಬೇಕು ಎಂದು ಸಂದೇಶ ನೀಡಿದ ಬ್ರಹ್ಮ ಶ್ರೀ ನಾರಾಯಾಣ ಗುರು ಅವರು ಆದರ್ಶಗಳನ್ನು ಮೈಗೂಡಿಸಿಕೊಂಡು ಎಲ್ಲರೂ ಪಾಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ಏರ್ಪಡಿಸಲಾಗಿದ್ದ ಬ್ರಹ್ಮ ಶ್ರೀ ನಾರಾಯಾಣ ಗುರು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಒಂದು ಸಮಾಜಕ್ಕೆ ಅವರು ಸೀಮಿತವಾಗಿರಲ್ಲಿಲ್ಲ, ಪ್ರತಿಯೊಬ್ಬರಿಗೂ ದೇವಸ್ಥಾನ ಪ್ರವೇಶ ಮಾಡಲು ಅವಕಾಶವಿದೆ ಎಂಬ ಹಕ್ಕನ್ನು ಪ್ರತಿಪಾದಿಸಿದ್ದರು ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲೇಶ್‌ಗೌಡ ಅವರು ಮಾತನಾಡಿ, ಬ್ರಹ್ಮ ಶ್ರೀ ನಾರಾಯಾಣ ಗುರುಗಳು ಉತ್ಕೃಷ್ಟವಾದ ಕಾರ್ಯಗಳನ್ನು ಮಾಡಿದ್ದಾರೆ. ತಳ ಸಮುದಾಯಗಳಲ್ಲಿ ಆತ್ಮ ವಿಶ್ವಾಸ ಮೂಡಿಸಿದ್ದಾರೆ. ಶ್ರದ್ದೆ, ಗುರಿ, ಧ್ಯೇಯ ಹಾಗೂ ಕಠಿಣ ಪರಿಶ್ರಮದಿಂದ ನಾರಾಯಾಣ ಗುರುಗಳು ಬ್ರಹ್ಮ ಶ್ರೀ ಗಳಾದರು ಎಂದು ಹೇಳಿದರು.
ಬ್ರಹ್ಮ ಶ್ರೀ ನಾರಾಯಾಣ ಗುರುಗಳು 70 ಕ್ಕೂ ಹೆಚ್ಚು ಶ್ರೇಷ್ಠ ಕೃತಿಗಳನ್ನು ರಚಿಸಿದ್ದಾರೆ. ಅವರ ಕೃತಿಯಲ್ಲಿ ವೈಜ್ಞಾನಿಕ ಜಗತ್ತಿಗೆ ಅಡಿಪಾಯದ ಅಂಶಗಳು ಕೂಡಿವೆ ಎಂದರಲ್ಲದೆ, ಆಧ್ಯಾತ್ಮಿಕದೊಂದಿಗೆ ಸಾಮಾಜಿಕತೆಯನ್ನು ಒಟ್ಟಿಗೆ ನೋಡುವ ದೃಷ್ಠಿಕೋನ ಹೊಂದಿದ್ದರು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು ಎಂದರು.
ಎ.ವಿ.ಕೆ.ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ಆರ್ಯ ಈಡಿಗರ ಮಹಿಳಾ ಸಂಘದ ಅಧ್ಯಕ್ಷೆ ಉಷಾ ಕೃಷ್ಣಮೂರ್ತಿ ಮಾತನಾಡಿ, ತಮ್ಮ ಅನುಭವಗಳನ್ನು ಉದಾಹರಿಸಿ ಮಾತನಾಡಿದರು.
ಕಾರ್ಯಕ್ರಮಕ್ರದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಸ್ವಾತಂತ್ರ್ಯ ಹೋರಾಟಗಾ ಹೆಚ್.ಎಂ.ಶಿವಣ್ಣ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ.ಕೃಷ್ಣೇಗೌಡ, ಆರ್ಯ ಈಡಿಗರ ಸಂಘ ಅಧ್ಯಕ್ಷ ಧರ್ಮ ವಿಜೇತ್, ಕಾರ್ಯದರ್ಶಿ ಜಿ.ಆ.ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ಮಹಂತೇಶ್ ಇತರರು ಇದ್ದರು.