ಬ್ಯುಟಿಶಿಯನ್ ತರಬೇತಿ

Published on

ಹುಬ್ಬಳ್ಳಿ: ವಿದ್ಯಾನಗರದಲ್ಲಿರುವ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್​ನ ನಿರಂತರ ತಾಂತ್ರಿಕ ಶಿಕ್ಷಣ (ಸಿಸಿಟೆಕ್) ಘಟಕವು ಫೆಬ್ರುವರಿ ತಿಂಗಳಲ್ಲಿ ನಿರುದ್ಯೋಗಿ ಯುವತಿಯರಿಗಾಗಿ ಬ್ಯುಟಿಶಿಯನ್ ತರಬೇತಿ ಆರಂಭಿಸಲಿದೆ.

ಕನಿಷ್ಠ ಎಸ್​ಎಸ್​ಎಲ್​ಸಿ ಪಾಸ್, ಫೇಲ್ ಆದ ಅಭ್ಯರ್ಥಿಗಳು ಹೆಸರು ನೋಂದಾಯಿಸಬಹುದಾಗಿದೆ. ಆಸಕ್ತರು ‘ನಾಗರಾಜ ಬ್ಯಾಕೋಡ, ಸಿಸಿಟೆಕ್ ವಿಭಾಗದ ವ್ಯವಸ್ಥಾಪಕರು, ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ವಿದ್ಯಾನಗರ, ಹುಬ್ಬಳ್ಳಿ’ ಇಲ್ಲಿಗೆ ಸಂಪರ್ಕಿಸಬಹುದು ಎಂದು ಪ್ರಾಚಾರ್ಯ ಗಣಪತಿ ಹೆಳವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net