ಬ್ಯಾಸ್ಕೆಟ್‌ಬಾಲ್: ಟೆರಿಷಿಯನ್ ಪಿಯು ಕಾಲೇಜು ಪ್ರಥಮ

15
Published on

ಮೈಸೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಹಾಕಿ ಸೇರಿದಂತೆ ಇನ್ನಿತರ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು.
ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನದ ಅಂಗವಾಗಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಶಾಸಕ ತನ್ವೀರ್ ಸೇಠ್ ಧ್ಯಾನ್‌ಚಂದ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಹಾಕಿ ಬಾಲ್ ತಳ್ಳುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್, ಪಾಲಿಕೆ ಸದಸ್ಯ ಸತ್ಯರಾಜು, ಗ್ರಂಥಾಲಯ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ಶ್ರೀಕಾಂತ್ ಇತರರು ಇದ್ದರು.
ಪಂದ್ಯಾವಳಿಯ ಫಲಿತಾಂಶ:
ಬ್ಯಾಸ್ಕೆಟ್‌ಬಾಲ್: ಟೆರಿಷಿಯನ್ ಪಿಯು ಕಾಲೇಜು (ಪ್ರಥಮ), ಟೆರಿಷಿಯನ್ ಪಿಯು ಕಾಲೇಜು ಎ ತಂಡ (ದ್ವಿತೀಯ), ಟೆರಿಷಿಯನ್ ಪಿಯು ಕಾಲೇಜು ಬಿ ತಂಡ (ತೃತೀಯ) ಸ್ಥಾನ ಪಡೆದುಕೊಂಡಿತು.
ಹಾಕಿ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಸೇಂಟ್ ಜೋಸೆಫ್ (ಪ್ರ), ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ದ್ವಿ), ಮಹಾಜನ ಕಾಲೇಜು (ತೃ). ಮಹಿಳೆಯರ ವಿಭಾಗದಲ್ಲಿ ಅದಿರಾ ನೇತೃತ್ವದ ಭಜರಂಗಿ ತಂಡ (ಪ್ರ), ಎಂ.ಜಿ.ಯಶಿಕಾ ನೇತೃತ್ವದ ಶ್ರೀಕೃಷ್ಣ ತಂಡ (ದ್ವಿ), ಜೆ.ಚಂದನಾ ನೇತೃತ್ವದ ದ್ರೋಣ ತಂಡ (ತೃ) ಬಹುಮಾನ ಪಡೆದುಕೊಂಡಿತು.
ಹಗ್ಗಜಗ್ಗಾಟದ ಮಹಿಳೆಯರ ವಿಭಾಗದಲ್ಲಿ ಪೂಜಿತಾ ಮತ್ತು ತಂಡ (ಪ್ರ), ನಿಶು ಮತ್ತು ತಂಡ (ದ್ವಿ), ದ್ರವ್ಯ ಮತ್ತು ತಂಡ (ತೃ). ಪುರುಷರ ವಿಭಾಗದಲ್ಲಿ ಬಿ.ಎಸ್.ಪೊನ್ನಪ್ಪ ಮತ್ತು ತಂಡ (ಪ್ರ), ಎಂ.ಡಿ.ಕರಿಯಪ್ಪ ಮತ್ತು ತಂಡ (ತೃ) ಸ್ಥಾನ ಪಡೆದುಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net