ಬ್ಯಾರಿಕೇಡ್ ತೆರವುಗೊಳಿಸಲು ಆಗ್ರಹ

09 Jaggu 2-Web
ಬೆಳಗಾವಿ ಟಿಳಕವಾಡಿ ಮೊದಲ ಗೇಟ್ ಬಳಿ ಅಳವಡಿಸಿರುವ ಬ್ಯಾರಿಕೇಡ್ ಅಳವಡಿಕೆಯಿಂದಾಗಿ ಆಗುವ ಸಮಸ್ಯೆ ಬಿಂಬಿಸುವ ಫೋಟೋಗಳೊಂದಿಗೆ ಹೋರಾಟಗಾರ ಸುಭಾಷ ಘೋಲಪ ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಲು ಆಗಮಿಸಿದ್ದರು. ದೀಪಕ ಗೌಂದವಾಡಕರ, ವಾಸು ಬಿ.ಇದ್ದರು.
Published on

ಬೆಳಗಾವಿ: ಟಿಳಕವಾಡಿ ಮೊದಲ ಗೇಟ್ ಬಳಿ ಅಳವಡಿಸಿರುವ ಬ್ಯಾರಿಕೇಡ್ ತೆರವು ಮಾಡುವಂತೆ ಒತ್ತಾಯಿಸಿ ಹೋರಾಟಗಾರ ಸುಭಾಷ ಘೋಲಪ ಜಿಲ್ಲಾಧಿಕಾರಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ 2014ರ ಜೂನ್ 19ರಂದು ಟಿಳಕವಾಡಿ ಮೊದಲ ಗೇಟ್ ಬಳಿ ಟ್ರಾಫಿಕ್ ಪೊಲೀಸರು ಜನರ ಸುರಕ್ಷತೆ ದೃಷ್ಟಿಯಿಂದ ಬ್ಯಾರಿಕೇಡ್ ಹಾಕಿದ್ದಾರೆ. ಇದರಿಂದ ಇಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಜನರು ಸಂಚಾರಕ್ಕೆ ಸಂಚಕಾರ ಎದುರಾಗಿದೆ. ಪ್ರತಿದಿನ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಟಿಳಕವಾಡಿಯ ಸೋಮವಾರ ಪೇಟೆ, ಮಂಗಳವಾರ ಪೇಟೆ, ಬುಧವಾರ ಪೇಟೆ, ಗುರುವಾರ ಪೇಟೆ, ರಾಯ್ ರಸ್ತೆಗೆ ತೆರಳುವ ಜನರಿಗೆ ಸಮಸ್ಯೆಯಾಗಿದೆ. ಹೀಗಾಗಿ, ಬ್ಯಾರಿಕೇಡ್ ತೆರವುಗೊಳಿಸಿ, ಓವರ್ ಬ್ರಿಡ್ಜ್ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. ಅಲ್ಲಿನ ಸಮಸ್ಯೆ ಬಗೆಗಿನ 100 ಫೋಟೋಗಳೊಂದಿಗೆ ಮನವಿ ಸಲ್ಲಿಸಿದರು. ದೀಪಕ ಗೌಂದವಾಡಕರ, ವಾಸು ಬಿ.ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net