ಬ್ಯಾರನ್‌ಗೆ ಬೆಂಕಿ ತಗುಲಿ ತಂಬಾಕು ಭಸ್ಮ

17ark1
Published on

ರಕಲಗೂಡು: ತಾಲೂಕಿನ ಹಾನಗಲ್ ಗ್ರಾಮದಲ್ಲಿ ಬುಧವಾರ ಆಕಸ್ಮಿಕವಾಗಿ ಬ್ಯಾರನ್‌ಗೆ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂ. ಮೌಲ್ಯದ ತಂಬಾಕು ಭಸ್ಮವಾಗಿದೆ.

ಗ್ರಾಮದ ಜಯಲಕ್ಷ್ಮೀ ಗೋಪಾಲಕೃಷ್ಣ ಎಂಬುವರ ಬ್ಯಾರನ್ ಹೊಗೆಸೊಪ್ಪು ಹದಗೊಳಿಸುತ್ತಿದ್ದಾಗ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದಿದೆ.

ಗ್ರಾಮಸ್ಥರು ಮೋಟಾರ್ ಪೈಪ್‌ಗಳ ಮೂಲಕ ನೀರು ಹರಿಸಿ ಬೆಂಕಿ ನಂದಿಸಲು ಯತ್ನಿಸಿದರೂ ಸುಟ್ಟು ಭಸ್ಮವಾಗಿದೆ. ಬ್ಯಾರನ್‌ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ನಾಲ್ಕು ಕ್ವಿಂಟಾಲ್ ತಂಬಾಕು ಬೆಂದು ಅಪಾರ ನಷ್ಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net