ಬ್ಯಾಡ್ಮಿಂಟನ್‌ನಲ್ಲಿ ಶೇಷಾದ್ರಿಪುರಂ,ಬಿಎಂಎಸ್ ತಂಡಗಳು ಪ್ರಥಮ

CTD 5 BADMINTON-MAHILE=002
Published on


ಚಿತ್ರದುರ್ಗ: ಹುಬ್ಬಳ್ಳಿಯ ರಾಜ್ಯಕಾನೂನು ಮಹಾವಿದ್ಯಾಲಯ ಹಾಗೂ ಚಿತ್ರದುರ್ಗದ ಎಸ್‌ಜೆಎಂ ಕಾನೂನು ಮಹಾವಿದ್ಯಾಲಯ ಸಂಯುಕ್ತ ಆ ಶ್ರಯದಲ್ಲಿ ನಗರದ ವೀರ ವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಸೋಮವಾರದಿಂದ ಏರ್ಪಡಿಸಿದ್ದ 2 ದಿನಗಳ ಕಾನೂನು ವಿಶ್ವವಿದ್ಯಾ ಲಯ ಅಂತರ್ ಮಹಾವಿದ್ಯಾಲಯಗಳ ಬ್ಯಾಡ್ಮಿಂಟನ್ ಪಂದ್ಯಾವಳಿ ಪುರುಷರ ವಿಭಾಗದಲ್ಲಿ ಬೆಂಗಳೂರು ಶೇಷಾದ್ರಿಪುರಂ ಕಾನೂನು ಮಹಾವಿದ್ಯಾಲಯ ತಂಡ ಪ್ರಥಮ ಹಾಗೂ ಹಾಸನದ ಸರ್ಕಾರಿ ಕಾನೂನು ಮಹಾ ವಿದ್ಯಾಲಯದ ತಂಡ ಹಾಸನ ದ್ವಿತೀಯ ಹಾಗೂ ಬೆಂಗಳೂರು ಕೆ ಎಲ್ಇ ಕಾನೂನು ಮಹಾದ್ಯಾಲಯ ತೃತೀಯ ಸ್ಥಾನಗಳನ್ನು ಪಡೆದಿವೆ.

ಮಹಿಳೆಯರ ವಿಭಾಗದಲ್ಲಿ ಬೆಂಗಳೂರು ಬಿಎಂಎಸ್ ಕಾನೂನು ಮಹಾವಿದ್ಯಾಲಯದ ತಂಡ ಪ್ರಥಮ,ಮಂಗಳೂರು ಎಸ್‌ಡಿಎಂ ಕಾನೂನು ಮಹಾ ವಿದ್ಯಾಲಯದ ತಂಡ ದ್ವಿತೀಯ ಹಾಗೂ ಕ್ರಿಸ್ತು ಜಯಂತಿ ಕಾನೂನು ಮಹಾವಿದ್ಯಾಲಯ ಬೆಂಗಳೂರು ತೃತೀಯ ಸ್ಥಾನವನ್ನು ಗಳಿಸಿವೆ.
ಮಂಗಳವಾರ ನಡೆದ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಹುಬ್ಬಳ್ಳಿ ಕಾನೂನು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಖಾಲಿದ್‌ಖಾನ್ ಬಹುಮಾನ ವಿತರಿಸಿದರು.

ಎಸ್‌ಜೆಎಂ ಇಂಜಿನಿಯರಿಂಗ್ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಕುಮಾರ್-ವಕೀಲೆ ಚಂಪಾ ದಂಪತಿ ಪುತ್ರಿ,ಬ್ಯಾಡ್ಮಿಂಟನ್ ರಾಷ್ಟ್ರೀಯ ಕ್ರೀಡಾಪಟು ಕೆ.ಶ್ರೇಯಾ ಅವರನ್ನು ಸನ್ಮಾನಿಸಲಾಯಿತು. ಎಸ್‌ಜೆ ಎಂ ಕಾನೂನು ಮಹಾ ವಿದ್ಯಾಲಯದ ಪ್ರಾಚಾರ‌್ಯ ಡಾ.ಕೆ.ದಿನೇಶ್,ಕ್ರೀಡಾ ಇಲಾಖೆಯ ಮೊಹಮ್ಮದ್ ಮುಹೀಬುಲ್ಲ ಮತ್ತಿತರರು ಇದ್ದರು. ಶೈಲಜಾ ನಿರೂಪಿಸಿ,ಲೊಕೇಶರೆಡ್ಡಿ ಸ್ವಾಗತಿಸಿದರು. ಎಂ.ರಮೇಶ್ ವಂದಿಸಿದರು.

(

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net