

ಮಳಖೇಡ: ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಇಲ್ಲಿನ ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು ಗೆಲುವು ಸಾಧಿಸಿ, ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಾದ ಶಿವು ಜಮಾದಾರ, ದೇವರಾಜ್, ನಿತ್ಯಾನಂದ, ಸಂಗಮೇಶ, ಚಂದ್ರಶೆಟ್ಟಿ, ಭರತ್, ಸಂದೀಪ್, ಕೇದಾರಲಿಂಗ, ವಿಶಾಲ್, ಸಂತೋಷ ಅತ್ಯುತ್ತಮ ಪ್ರದರ್ಶನ ನೀಡಿ, ಶಾಲೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ತರಬೇತಿದಾರರಾದ ವೆಂಕಟೇಶ, ವಿಜಯಕುಮಾರ, ವ್ಯವಸ್ಥಾಪಕ ಗೋಪಾಲದಾಸ ತಂಡದೊAದಿಗೆ ಇದ್ದರು.
ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರಾದ ರಾಜಕುಮಾರ ಕಟ್ಟಿ, ಲೋಹಿತ ಪೂಜಾರಿ, ಶ್ರೀಕಾಂತ, ರೇವಣಸಿದ್ದ ಪಾಟೀಲ್, ಪ್ರಶಾಂತ, ಅಶ್ವಿನಿ ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.