ಬ್ಯಾಡ್ಮಿಂಟನ್ ತಂಡದ ಪರಿಸರ ಕಾರ್ಯ

6kmr1
Published on

ಕಮಲನಗರ: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರ 51ನೇ ಜನ್ಮದಿನದ ನಿಮಿತ್ತ ಪಟ್ಟಣದ ಬ್ಯಾಡ್ಮಿಂಟನ್ ಅಸೋಸಿಯೇಷನ್ನಿಂದ ಸ್ವಚ್ಛತಾ ಹಾಗೂ ಸಸಿ ನೆಡುವ ಕಾರ್ಯಕ್ರಮ ಸೋಮವಾರ ನಡೆಯಿತು. ಡಾ.ಚನ್ನಬಸವ ಪಟ್ಟದ್ದೇವರ ಸ್ಮಾರಕ ಭವನ ಆವರಣವನ್ನು ಸ್ವಚ್ಛಗೊಳಿಸಿ, ಆವರಣದಲ್ಲಿ ಸಸಿ ನೆಡಲಾಯಿತು.
ಕಸಾಪ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ ಮಾತನಾಡಿ, ಸಚಿವ ಚವ್ಹಾಣ್ ಅವರ ಜನ್ಮದಿನದ ನಿಮಿತ್ತ ಯುವಕರು ಪರಿಸರ ಜಾಗೃತಿಗಾಗಿ ಸಸಿಗಳನ್ನು ನೆಡಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಹೆಚ್ಚು ಸಸಿ ನೆಟ್ಟು ಪರಿಸರ ಸಮತೋಲನ ಕಾಪಾಡಬಹುದು ಎಂದರು. ಅಸೋಸಿಯೇಷನ್ ಅಧ್ಯಕ್ಷ ಶಿವಾನಂದ ವಡ್ಡೆ ಮಾತನಾಡಿ, ಸಾರ್ವಜನಿಕರು ತಮ್ಮ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಜತೆಗೆ ಅವರವರ ಮನೆಗಳ ಮುಂದೆ ಸಸಿ ನೆಟ್ಟು, ಪೋಷಿಸಬೇಕು ಎಂದರು.
ಕಾರ್ಯದರ್ಶಿ ವಿಜಯಕುಮಾರ ಕೋಡಗೆ ಮಾತನಾಡಿ, ಪರಿಸರ ಸಂರಕ್ಷಣೆ ಮಾಡಿದರೆ ಪ್ರಾಕೃತಿಕ ವಿಕೋಪಗಳು ಸಂಭವಿಸುವ ಸಾಧ್ಯತೆ ಕಡಿಮೆ ಇರುತ್ತವೆ ಎಂದರು.
ಗ್ರಾಪಂ ಸದಸ್ಯ ಬಾಲಾಜಿ ತೇಲಂಗ, ಹಾವಗಿರಾವ ಟೊಣ್ಣೆ, ಶಾಮರಾವ ಬಿರಾದಾರ, ಅಮರ ಶಿವಣಕರ, ಜೀತೇಂದ್ರ ಮಹಾಜನ, ಅಶೋಕ ಮುದ್ದಾ, ಅಜೀತ ರಾಗಾ, ರಾಜಕುಮಾರ ಯನಗುಂದೆ, ಅವಿನಾಶ ಶಿವಣಕರ, ಸಂತೋಷ ಕನಾಡೆ, ಶಶಿಕಾಂತ ಮಹಾಜನ, ಸೋಮು ಮಹಾಜನ, ರಾಜಶೇಖರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net