ಬ್ಯಾಡಗಿ ಶಾಸಕನ ಪುತ್ರನ ಕಾರು ಬಸ್​ಗೆ ಡಿಕ್ಕಿ

3-RNR-06
Published on

ಶಿಗ್ಗಾಂವಿ: ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರ ಪುತ್ರ ಯುವರಾಜ ಓಡಿಸುತ್ತಿದ್ದ ಕಾರು ಕೆಎಸ್​ಆರ್​ಟಿಸಿ ಬಸ್​ಗೆ ಡಿಕ್ಕಿ ಹೊಡೆದ ಘಟನೆ ನಗರದ ಹೊರವಲಯದ ರಂಭಾಪುರಿ ಕಾಲೇಜ್​ನ ಎದುರು ಬುಧವಾರ ನಡೆದಿದೆ.

ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನ ಯುವರಾಜ ವಿರೂಪಾಕ್ಷಪ್ಪ ಬಳ್ಳಾರಿ (32) ಹಾವೇರಿ ಕಡೆಯಿಂದ ಹುಬ್ಬಳ್ಳಿಯೆಡೆ ಹೊರಟ್ಟಿದ್ದಾಗ ದಾರಿ ಮಧ್ಯೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬಸ್ ಹಾಗೂ ಕಾರು ಜಖಂಗೊಂಡಿವೆ. ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ. ಶಿಗ್ಗಾಂವಿ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net