ಬ್ಯಾಚಹಳ್ಳಿಯಲ್ಲಿ ಬೆಂಕಿಗೆ ಅಪಾರ ನಷ್ಟ

4 skpp 2
ಪಶ್ಚಿಮಘಟ್ಟದ ಶೋಲಾ ಹುಲ್ಲುಗಾವಲಿನಲ್ಲಿ ಬೆಂಕಿ ಕಾಣಿಸಿಕೊಂಡಿರುವುದು.
Published on

ಸಕಲೇಶಪುರ: ತಾಲೂಕಿನ ಬ್ಯಾಚಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಂಕಿಗೆ ಎರಡು ಎಕರೆ ಕಾಫಿ ತೋಟ ಆಹುತಿಯಾಗಿದೆ.

ಗ್ರಾಮದ ಹೊರವಲಯದ ಕುರುಚಲು ಅರಣ್ಯಕ್ಕೆ ಕಿಡಿಗೇಡಿಗಳು ಹಾಕಿದ ಬೆಂಕಿ ಮನೆಗಳಿಗೂ ವ್ಯಾಪಿಸುವ ಹಂತ ತಲುಪಿತು. ಆದರೆ ಸಕಾಲಕ್ಕೆ ಗ್ರಾಮಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಗ್ರಾಮಸ್ಥರ ಸಹಕರದೊಂದಿಗೆ ಹೆಚ್ಚಿನ ಅನಾಹುತ ತಡೆದಿದ್ದಾರೆ. ಆದರೆ, ಗ್ರಾಮದ ಧರ್ಮರಾಜ್ ಎಂಬುವವರಿಗೆ ಸೇರಿದ ಎರಡು ಎಕರೆ ಕಾಫಿ ತೋಟ ಸಂಪೂರ್ಣ ಸುಟ್ಟು ಹೋಗಿದೆ.

ಶನಿವಾರವೂ ನೂರಾರು ಎಕರೆ ಅರಣ್ಯ ನಾಶವಾಗಿದೆ. ತಾಲೂಕಿನಲ್ಲಿ ಕಳೆದ ಹಲವು ದಿನಗಳಿಂದ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಪಶ್ಚಿಮಘಟ್ಟದ ಶೋಲಾ ಹುಲ್ಲುಗಾವಲು ಬಹುತೇಕ ಸುಟ್ಟುಕರಕಲಾಗಿದೆ. ಅರಣ್ಯ ಪ್ರದೇಶಕ್ಕೂ ಸಾಕಷ್ಟು ಹಾನಿಯಾಗಿದೆ. ಸರಿಸೃಪ, ಕಾಡುಪ್ರಾಣಿಗಳು ಸಹ ಬಲಿಯಾಗಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net