

ಚಿತ್ರದುರ್ಗ: ಮಕ್ಕಳ ಸಮಗ್ರ ಬೆಳವಣಿಗೆ,ಕೌಶಲಗಳು ಹಾಗೂ ಮೌಲ್ಯಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಶನಿವಾರ ಬ್ಯಾಗ್‌ಲೆಸ್ ಡೇ ಆಚರಿಸಲಾಯಿತು. ಪಠ್ಯಚೀಲವಿಲ್ಲದೆ ಬಂದ ಚಿತ್ರದುರ್ಗ ತಾಲೂಕಿನ ಸರ್ಕಾರಿ,ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 1ರಿಂದ 8ನೇ ತರಗತಿ ವಿದ್ಯಾರ್ಥಿಗಳು ಬ್ಯಾಗ್ ರಹಿತವಾಗಿ ಶಾಲೆಗೆ ಆಗಮಿಸಿ ಸಂಭ್ರಮಿಸಿದರು.
ಬದುಕಿಗೆ ಪೂರಕವಾಗಿ ಸಾರ್ವಜನಿಕ ಸೌಕರ್ಯಗಳು ಮತ್ತು ಜವಾಬ್ದಾರಿ,ಆರೋಗ್ಯಕರ ಜೀವನ ಶೈಲಿ,ಸ್ವಾಸ್ಥ್ಯಮತ್ತು ಶುಚಿತ್ವ ಇತ್ಯಾದಿ 10 ವಿಷಯಗಳಿಡೆ ಜಾಗೃತಿ ಮೂಡಿಸಲಾಯಿತು.
ಗ್ರಂಥಾಲಯ ಭೇಟಿ,ಬ್ಯಾಂಕ್,ಬಸ್,ರೈಲ್ವೆ ನಿಲ್ದಾಣ,ಗ್ರಾಮಪಂಚಾಯಿತಿ ಕಚೇರಿ,ಗ್ರಂಥಾಲಯ,ಅಂಚೆ ಕಚೇರಿ,ಸಾರ್ವಜನಿಕ ಆಸ್ಪತ್ರೆ, ಪಶುವೈದ್ಯಕೀಯ ಆಸ್ಪತ್ರೆ,ವಾಟರ್‌ಫಿಲ್ಟರ್‌ಕೇಂದ್ರ ಮುಂತಾದ ಸಾರ್ವಜನಿಕ ಸ್ಥಳಗಳಿಗೆ ಮಕ್ಕಳನ್ನು ಕರೆದೊಯ್ದ ಶಿಕ್ಷಕರು ನಾಗರಿಕರ ಕರ್ತವ್ಯಗಳೆಡೆ ಅರಿವು ಮೂಡಿಸಿದರು.