ಬ್ಯಾಕೋಡದಲ್ಲಿ ಶಿಥಿಲ ಟ್ಯಾಂಕ್ ನೆಲಸಮ

Dilapidated tank leveled in Bakoda
ಸಿಂದಗಿ ತಾಲೂಕಿನ ಬ್ಯಾಕೋಡ ಗ್ರಾಮದ ಶಾಲಾ ಆವರಣದಲ್ಲಿದ್ದ ಶಿಥಿಲಗೊಂಡ ಕುಡಿಯುವ ನೀರಿನ ಟ್ಯಾಂಕ್‌ನ್ನು ನೆಲಸಮಗೊಳಿಸಲಾಯಿತು.
Published on

ಸಿಂದಗಿ: ತಾಲೂಕಿನ ಬ್ಯಾಕೋಡ ಗ್ರಾಮದ ಶಾಲೆ ಆವರಣದಲ್ಲಿದ್ದ ಶಿಥಿಲಗೊಂಡ ನೀರಿನ ಟ್ಯಾಂಕ್‌ನ್ನು ಶನಿವಾರ ನೆಲಸಮ ಮಾಡಲಾಯಿತು.
ಕಳೆದ ಜು.12ರಂದು ವಿಜಯವಾಣಿಯಲ್ಲಿ ಪ್ರಕಟಗೊಂಡ ‘ಬಲಿಗಾಗಿ ಕಾದಿರುವ ಶಿಥಿಗೊಂಡ ಟ್ಯಾಂಕ್’ ಎಂಬ ಶೀರ್ಷಿಕೆಯಡಿ ಸುದ್ದಿ ಗಮನಿಸಿದ ಜಿಲ್ಲಾಮಟ್ಟದ ಅಧಿಕಾರಿಗಳು ತಾಲೂಕುಮಟ್ಟದ ಅಧಿಕಾರಿಗಳಿಗೆ ತಾಲೂಕಿನ ಬ್ಯಾಕೋಡ ಗ್ರಾಮಕ್ಕೆ ಭೇಟಿ ನೀಡಿ ವರದಿ ಕೊಡುವಂತೆ ಸೂಚಿಸಿದ್ದರು.

ವರದಿ ಪರಿಶೀಲಿಸಿದ ಮೇಲಧಿಕಾರಿಗಳ ಸೂಚನೆಯಂತೆ ತಾಲೂಕು ಪಂಚಾಯಿತಿ ಇಒ ಬಾಬು ರಾಠೋಡ ಹಾಗೂ ಆರ್‌ಎಬ್ಲುೃಎಸ್ ಎಇ ವೀರೇಂದ್ರ ನಾಯಕ ಭೇಟಿ ನೀಡಿ, ಗ್ರಾಪಂ ಅಧಿಕಾರಿಗಳಿಗೆ ತಕ್ಷಣವೇ ನೀರು ಸಂಗ್ರಹಿಸುವುದನ್ನು ನಿಲ್ಲಿಸಿ ನೆಲಸಮಗೊಳಿಸಲು ತಿಳಿಸಿದ್ದರು.
ವಿಜಯವಾಣಿಗೆ ಕಳೆದ ಭಾನುವಾರ ನೆಲಸಮಗೊಳಿಸುವುದಾಗಿ ಭರವಸೆ ನೀಡಿದ್ದರು. ಭರವಸೆಯ ದಿನಕ್ಕಿಂತಲೂ ಒಂದು ದಿನ ಮುಂಚೆಯೇ ಜು.15 ರಂದು ಶಾಲಾ ಅವಧಿ ಮುಗಿದ ನಂತರದಲ್ಲಿ ಜೆಸಿಬಿ ಮೂಲಕ ಶಿಥಿಲಗೊಂಡ ಟ್ಯಾಂಕ್ ನೆಲಸಮ ಮಾಡಲಾಯಿತು. ವಿಜಯವಾಣಿಯ ಕಾಳಜಿ ವರದಿಗೆ ಶಾಲೆ ಮುಖ್ಯಸ್ಥರು, ಶಿಕ್ಷಕರು, ಅಡುಗೆ ಸಿಬ್ಬಂದಿ ಹಾಗೂ ಮಕ್ಕಳ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net