ಬ್ಯಾಂಕ್‌ನಿಂದ 29.5 ಲಕ್ಷ ರೂ. ವಂಚನೆ

Saiyad kareem
Published on

ಚಿತ್ರದುರ್ಗ: ಚಳ್ಳಕೆರೆಯ ಬ್ಯಾಂಕ್‌ವೊಂದರಿಂದ 29.5 ಲಕ್ಷ ರೂ. ವಂಚನೆ ಆಗಿದ್ದು, ಬಡ್ಡಿ ಸಮೇತ ಹಣ ಹಿಂದಿರುಗಿಸದಿದ್ದರೆ, ನ್ಯಾಯ ಸಿಗುವವರೆಗೂ ಬ್ಯಾಂಕ್ ಮುಂದೆ ಏಕಾಂಗಿ ಇಲ್ಲವೇ ಕಾನೂನು ಹೋರಾಟ ನಡೆಸಲಾಗುವುದು ಎಂದು ಸೈಯದ್ ಕರೀಂ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಳಕು ಗ್ರಾಮಕ್ಕೆ ಸೇರಿದ 18 ಗುಂಟೆ ಜಮೀನು ಸಂಬಂಧ ಬ್ಯಾಂಕ್ 2023ರಲ್ಲಿ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು, 29.5 ಲಕ್ಷ ರೂ.ವರೆಗೂ ಕೂಗಿ ಪಡೆಯಲಾಯಿತು. ಆದರೆ, ಅದರ ಮಾಲೀಕತ್ವ ಈವರೆಗೂ ನನಗೆ ಸಿಕ್ಕಿಲ್ಲ ಎಂದು ದೂರಿದರು.

ಸಾಲ ನೀಡಬೇಕಾದವರು ಬ್ಯಾಂಕ್‌ಗೆ ಹಿಂದಿರುಗಿಸಿಲ್ಲ. ಹೀಗಾಗಿ ಹರಾಜು ಮೂಲಕ ಯಾರು ಬೇಕಾದರೂ ಪಡೆಯಬಹುದೆಂಬ ನೋಟಿಸ್ ನೀಡಿದ್ದರಿಂದ ಪಾಲ್ಗೊಂಡೆವು. ಬ್ಯಾಂಕ್ ವ್ಯವಹಾರ ಪಾರದರ್ಶಕವೆಂದು ನಂಬಿದ್ದೆವು. ಆದರೆ, ಮತ್ತಿನ್ಯಾರದೋ ಆಸ್ತಿಯ ರಿ.ಸರ್ವೆ ನಂಬರ್ ತೋರಿಸಿ ಅಧಿಕಾರಿಗಳು ವಂಚಿಸಿದ್ದಾರೆ ಎಂದು ಆರೋಪಿಸಿದರು.

ಹರಾಜು ನಂತರ ಬ್ಯಾಂಕ್ ಅಧಿಕಾರಿಗಳು ಹೇಳಿದಂತೆ ನಾಲ್ಕು ಬಾರಿ ಹಣ ಪಾವತಿಸಿದ್ದೇನೆ. ಅದಕ್ಕೆ ಸಂಬಂಧಿಸಿದ ರಸೀದಿಗಳು ಇವೆ. ಆದರೆ, ನೋಂದಣಿಗೆ ಉಪನೋಂದಾಣಾಧಿಕಾರಿ ಕಚೇರಿಗೆ ಹೋದಾಗ ಕಳೆದ 15 ವರ್ಷಗಳಿಂದಲೂ ಆರ್.ಸತೀಶ್ ಎನ್ನುವವರ ಹೆಸರಿನಲ್ಲಿ ಆಸ್ತಿ ಇದೆ. ಈತನಿಗೂ, ಬ್ಯಾಂಕ್‌ಗೂ ಯಾವ ಸಂಬಂಧವಿಲ್ಲ. ಕೆಲ ಬ್ಯಾಂಕ್‌ಗಳಿಂದ ದೊಡ್ಡ ಮಟ್ಟದಲ್ಲೂ ವಂಚನೆ ನಡೆಯುತ್ತಿರಬಹುದು ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net