

ರಾಯಬಾಗ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ೬ ಸಾವಿರ ಕೋಟಿ ರೂ. ಷೇರು ಬಂಡವಾಳ ಹೊಂದಿದ್ದು, ೫ ಸಾವಿರ ಕೋಟಿ ರೂ. ಸಾಲ ನೀಡಿದ ರಾಜ್ಯದ ಏಕೈಕ ಬ್ಯಾಂಕ್ ಆಗಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ಹೇಳಿದರು.
ತಾಲೂಕಿನ ನಿಪನಾಳ ಗ್ರಾಮದಲ್ಲಿ ಬಿಡಿಸಿಸಿ ಬ್ಯಾಂಕ್ ೧೦೬ನೇ ಶಾಖೆ ಶುಕ್ರವಾರ ಉದ್ಘಾಟಿಸಿ ಮಾತನಾಡಿ, ರಾಜ್ಯದ ೨೨ ಬ್ಯಾಂಕ್‌ಗಳಲ್ಲಿ ಬಿಡಿಸಿಸಿ ಬ್ಯಾಂಕ್ ಪ್ರಥಮ ಸ್ಥಾನದಲ್ಲಿದೆ. ತಾಲೂಕಿನಲ್ಲಿ ಬ್ಯಾಂಕ್‌ನಿಂದ ವಿವಿಧ ಯೋಜನೆಯಡಿ ೩೯೫ ಕೋಟಿ ರೂ. ಸಾಲ ನೀಡಲಾಗಿದೆ ಎಂದರು.
ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎನ್.ಜಿ. ಕಲಾವಂತ ಮಾತನಾಡಿ, ಬಿಡಿಸಿಸಿ ಬ್ಯಾಂಕ್ ರೈತರ ಸಮಗ್ರ ಅಭಿವೃದ್ಧಿಗೆ ಸದಾ ಸಿದ್ಧವಿದೆ. ಸರ್ಕಾರದ ಹಲವು ಸಾಲಮನ್ನಾ ಯೋಜನೆಯನ್ನು ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ತಂದು ರೈತರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ನಿಪನಾಳ ಶಾಖೆ ೧.೫೦ ಕೋಟಿ ರೂ. ಠೇವು ಸಂಗ್ರಹಿಸಿ ದಾಖಲೆ ಮಾಡಿದೆ. ರಾಯಬಾಗ ಡಿಸಿಸಿ ಬ್ಯಾಂಕ್ ಕೃಷಿಯೇತರ ಸಾಲದಲ್ಲಿ ೩ನೇ ಸ್ಥಾನದಲ್ಲಿದೆ ಎಂದರು.
ರೇವಣಸಿದ್ಧೇಶ್ವರ ವಿರಕ್ತಮಠದ ಗುರುಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರಧಾನ ವ್ಯವಸ್ಥಾಪಕ ಎ.ಸಿ. ಕಲ್ಮಠ, ಶಂಕರ ಕುರಬೇಟ, ರಾಮಚಂದ್ರ ಹಿರಿಕೋಡಿ, ಅರ್ಜುನ ನಾಯಿಕವಾಡಿ, ರಾಜಶೇಖರ ಖನದಾಳೆ, ಸಿದ್ದಪ್ಪ ಮೀಸಿ, ಮೋಹನರಾವ ದೇಸಾಯಿ, ಪ್ರಕಾಶ ಹುಕ್ಕೇರಿ, ಶಿವಾನಂದ ಪಾಟೀಲ, ರೇಣುಕಾ ಪಡತರಿ, ಕೆಂಪಣ್ಣ ಮಳವಾಡ, ಶ್ರೀಶೈಲ ಅಗ್ನೆಪ್ಪಗೋಳ, ಪಾಂಡುರಂಗ ದೇಸಾಯಿ, ಎಸ್.ಬಿ.ಪಾಟೀಲ, ಎಂ.ಎ.ಜಂಬಗಿ, ಚಿದಾನಂದ ಬನಶಂಕರಿ, ಬಿ.ಎಂ.ಬಬಲೇಶ್ವರ, ಎಂ.ಬಿ.ಮರಡಿ, ಅಪ್ಪಾಸಾಹೇಬ ಬ್ಯಾಕೂಡ, ನಟರಾಜ ಮಾವರಕರ ಇತರರಿದ್ದರು.