

ಹಿರೇಬಾಗೇವಾಡಿ: ಇಲ್ಲಿನ ಬ್ಯಾಂಕ್ ಆ್ ಇಂಡಿಯಾ ಶಾಖೆಯಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಕೆಲಸ ಕಾರ್ಯಗಳು ವೇಳೆಗೆ ಸರಿಯಾಗಿ ಆಗುತ್ತಿಲ್ಲವೆಂಬ ದೂರುಗಳು ಗ್ರಾಹಕರಿಂದ ಕೇಳಿಬರುತ್ತಿವೆ. ಇದೀಗ ಸರ್ಕಾರದ ಯೋಜನೆಗಳ ಲಾನುಭವಿಗಳು ಬ್ಯಾಂಕಿಗೆ ಲಗ್ಗೆ ಇಟ್ಟಿದ್ದು, ಬ್ಯಾಂಕ್ ಪಾಸ್‌ಬುಕ್, ಆಧಾರ್ ಕಾರ್ಡ್, ಮೊಬೈಲ್ ನಂಬರ್ ಇತ್ಯಾದಿಗಳ ಜೋಡಣೆಗಾಗಿ ಮುಗಿಬೀಳುತ್ತಿದ್ದಾರೆ. ಜತೆಗೆ ಸರ್ವರ್ ಸರಿಯಾಗಿ ಕಾರ್ಯನಿರ್ವಹಿಸದೇ ಕೈಕೊಡುತ್ತಿರುವುದೂ ವಿಳಂಬಕ್ಕೆ ಕಾರಣವಾಗಿದೆ. ಅಲ್ಲದೆ ಈ ಶಾಖೆಯಲ್ಲಿ ಸಿಬ್ಬಂದಿ ಕೊರತೆಯೂ ಇದೆ.
ಅನ್ನಭಾಗ್ಯ ಮತ್ತು ಗಹಲಕ್ಷ್ಮೀ ಯೋಜನೆಗಳಡಿ ಕೆಲ ಲಾನುಭವಿಗಳು ತಮ್ಮ ಮೊಬೈಲ್‌ಗಳಿಗೆ ಮೆಸೇಜ್ ಮತ್ತು ಖಾತೆಗೆ ಹಣ ಬಾರದಿರುವುದರಿಂದ ಬ್ಯಾಂಕಿಗೆ ದೌಡಾಯಿಸುತ್ತಿದ್ದಾರೆ. ಎಷ್ಟೋ ಜನರ ಆಧಾರ್ ಕಾರ್ಡ್‌ಗಳಿಗೆ ಬ್ಯಾಂಕ್ ಖಾತೆ ಮತ್ತು ಮೊಬೈಲ್ ಸಂಖ್ಯೆ ಜೋಡಣೆಯಾಗದಿರುವುದರಿಂದ ಜನದಟ್ಟಣೆಗೆ ಕಾರಣವಾಗಿದೆ.