ಬ್ಯಾಂಕ್‌ಗೆ ಬೀಗ ಹಾಕಿ ಪ್ರತಿಭಟನೆ

web2
ದೊಡವಾಡ ಗ್ರಾಮಸ್ಥರಿಂದ ಕೆವಿಜಿ ಬ್ಯಾಂಕ್ ಶಾಖಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ನಿಂಗಪ್ಪ ಚೌಡಣ್ಣವರ, ರವಿ ಅಕ್ಕಿ, ಮಡಿವಾಳಪ್ಪ ಹತ್ತಿಕಟಗಿ ಇತರರಿದ್ದರು.
Published on

ಬೈಲಹೊಂಗಲ: ತಾಲೂಕಿನ ದೊಡವಾಡ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಿಂದ ದೊಡವಾಡ, ನನಗುಂಡಿಕೊಪ್ಪ, ಗುಡಿಕಟ್ಟಿ, ಚಿಕ್ಕಬೆಳ್ಳಿಕಟ್ಟಿ, ಗೋವನಕೊಪ್ಪ ಗ್ರಾಮಗಳ ಜನರಿಗೆ ಉತ್ತಮ ಸೇವಾ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಈಚೆಗೆ ಬ್ಯಾಂಕಿಗೆ ಬೀಗ ಹಾಕಿ ಗ್ರಾಮಸ್ಥರು ಪ್ರತಿಭಟಿಸಿದರು.

ಆಧಾರ್ ಕಾರ್ಡ್ ಜತೆ ಬ್ಯಾಂಕ್ ಖಾತೆ ಬೇಗ ಲಿಂಕ್ ಮಾಡಿಕೊಡಬೇಕು. ಬ್ಯಾಂಕಿಗೆ ಜಮೆ ಆದ ಹಣ ಬೇಗ ಸಿಗುವಂತಾಗಬೇಕು. ಎಟಿಎಂ ಪಾಯಿಂಟ್ ಮತ್ತು ಪಾಸ್‌ಬುಕ್ ಎಂಟ್ರಿ ಮಷಿನ್ ವ್ಯವಸ್ಥೆ ಮಾಡಬೇಕು. ಹೊಸ ಖಾತೆ ಮತ್ತು ಪಾಸ್‌ಬುಕ್ ವಿತರಣೆ ಒಂದೇ ದಿನದಲ್ಲಿ ಆಗಬೇಕು, ಹೆಚ್ಚಿನ ಸಿಬ್ಬಂದಿ ಒದಗಿಸಿ ಬ್ಯಾಂಕಿನ ಕೆಲಸಗಳು ತುರ್ತು ಆಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿ ಪ್ರಧಾನ ಶಾಖಾಧಿಕಾರಿ ಆರ್.ಕೆ.ಪ್ರಭಾಸ್‌ಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆ ಹಿನ್ನೆಲೆಯಲ್ಲಿ ದೊಡವಾಡ ಠಾಣೆ ಪಿಎಸ್‌ಐ ನಂದೀಶ ಮಧ್ಯಸ್ಥಿಕೆಯಲ್ಲಿ ಕೆವಿಜಿ ಬ್ಯಾಂಕ್ ಅಧಿಕಾರಿಗಳು ಹಾಗೂ ಗ್ರಾಮದ ಪ್ರಮುಖರ ಸಭೆ ನಡೆಸಲಾಯಿತು.

ಗ್ರಾಮದ ಪ್ರಮುಖರಾದ ನಿಂಗಪ್ಪ ಚೌಡಣ್ಣವರ, ರವಿ ಅಕ್ಕಿ, ಮಡಿವಾಳಪ್ಪ ಹತ್ತಿಕಟಗಿ, ರಾಮನಿಂಗ ಮೀಸಿ, ಮಡಿವಾಳಪ್ಪ ಅಕ್ಕಿ, ಶಿವನಪ್ಪ ಚೌಡಣ್ಣವರ, ಗಂಗಾಧರ ಕರಿಸೀರಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net